ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್‌ನಿಂದ ಗೆಹ್ಲೋಟ್ ಹೊರಕ್ಕೆ?

Public TV
2 Min Read
Ashok Gehlot 1

ಜೈಪುರ: ತೀವ್ರ ರಾಜಕೀಯ ಬಿಕ್ಕಟ್ಟು (Rajasthan Political Crisis) ಹಾಗೂ ಕಾಂಗ್ರೆಸ್‌ನ (Congress) ಆಂತರಿಕ ಕಲಹಗಳ ಕಾರಣದಿಂದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ರಾಷ್ಟ್ರೀಯ ಕಾಂಗ್ರೆಸ್ (AICC) ಅಧ್ಯಕ್ಷೀಯ ಚುನಾವಣೆ (Election) ರೇಸ್‌ನಿಂದ ಹೊರಗುಳಿಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

Ashok Gehlot 2

ಪ್ರಸ್ತುತ ಅಶೋಕ್ ಗೆಹ್ಲೋಟ್ ಅವರು ಹಿಂದೆ ಸರಿಯುತ್ತಿದ್ದಂತೆ ಉನ್ನತ ನಾಯಕತ್ವಕ್ಕಾಗಿ ಪಕ್ಷದ ಹಿರಿಯ ನಾಯಕರಾದ ಕೆ.ಸಿ ವೇಣುಗೋಪಾಲ್ (KC Venugopal), ದಿಗ್ವಿಜಯ ಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ರೇಸ್‌ನಲ್ಲಿದ್ದು, ಸೆಪ್ಟೆಂಬರ್ 30 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದಾಗಿ ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್ ಮುಖಂಡರು (Congress Leader) ತಿಳಿಸಿದ್ದಾರೆ. ಇದನ್ನೂ ಓದಿ: 10 YouTube ಚಾನೆಲ್‌ನ ವೀಡಿಯೋಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ

Sachin Pilot Ashok Gehlot 1

ಸದ್ಯ ರಾಜಸ್ಥಾನದಲ್ಲಿ ಉಂಟಾದ ಬಿಕ್ಕಟ್ಟಿನಿಂದ ರಾಹುಲ್ ಗಾಂಧಿ (Rahul Gandhi) ಅಸಮಾಧಾನಗೊಂಡಿದ್ದು, ಅಶೋಕ್ ಗೆಹ್ಲೋಟ್ ಸಹ ಇದಕ್ಕೆ ಕ್ಷಮೆಯಾಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಿನ್ನೆ ರಾತ್ರಿಯಿಂದ ಶುರುವಾದ ಹೈಡ್ರಾಮಾ ಈವರೆಗೂ ನಿಂತಿಲ್ಲ. ಅಶೋಕ್ ಗೆಹ್ಲೋಟ್‌ರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ.. ಅವರ ಸ್ಥಾನದಲ್ಲಿ ಸಚಿನ್ ಪೈಲಟ್ (SachinPilot) ತರಲು ಪ್ಲಾನ್ ಮಾಡಿದ್ದ ಹೈಕಮಾಂಡ್, ನಿನ್ನೆ ರಾತ್ರಿ ಸಿಎಲ್‌ಪಿ ಸಭೆ ಕರೆದಿತ್ತು. ಆದ್ರೆ, ಪೈಲಟ್ ಸಿಎಂ ಆಗಬಾರದು ಎಂದು ಪಟ್ಟು ಹಿಡಿದಿರುವ ಅಶೋಕ್ ಗೆಹ್ಲೋಟ್, ತಮ್ಮ ಬೆಂಬಲಿಗರನ್ನು ಮುಂದೆ ಬಿಟ್ಟು ಹೈಕಮಾಂಡ್‌ಗೆ ಸೆಡ್ಡು ಹೊಡೆದ್ರು. ಗೆಹ್ಲೋಟ್ ಬೆಂಬಲಿಸಿ 92 ಶಾಸಕರು ರಾಜೀನಾಮೆಗೆ ರೆಡಿ ಆಗಿದ್ದರು. ಇದನ್ನೂ ಓದಿ: ಮಗು ಏಕೆ ಕಪ್ಪಾಗಿದೆ ಎಂದು ಪತ್ನಿಯನ್ನೇ ಕೊಂದ ಪತಿ- ಎರಡೂವರೆ ವರ್ಷದ ಮಗುವಿನಿಂದ ಬಯಲಾಯ್ತು ರಹಸ್ಯ

Rahul Gandhi Ashok Gehlot And Sachin Pilot

ಸಚಿನ್ ಪೈಲಟ್ ಸಿಎಂ ಆದ್ರೆ ಪಕ್ಷಕ್ಕೆ ಪಂಜಾಬ್ ಸ್ಥಿತಿ ಬರುತ್ತೆ ಎಂದು ನೇರ ಎಚ್ಚರಿಕೆ ಕೊಟ್ರು. ಕಾಂಗ್ರೆಸ್ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ, ಅಜಯ್ ಮಕೇನ್ ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥ ಆಗಿವೆ. ಶಾಸಕರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸೋ ಪ್ರಯತ್ನವೂ ಫೇಲ್ ಆಗಿದೆ. ಸದ್ಯ ಅಶೋಕ್ ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷೀಯ ಚುನಾವಣೆ ರೇಸ್‌ನಿಂದ ಹಿಂದೆ ಸರಿದರೆ ರಾಜಾಸ್ಥಾನ ಮುಖ್ಯಮಂತ್ರಿಯಾಗಿಯೇ ಮುಂದುವರಿಯಲಿದ್ದಾರೆ. ಆದರೆ ಚುನಾವಣೆಯಿಂದ ಹಿಂದೆ ಸರಿಯುವ ಬಗ್ಗೆ ಯಾವುದೇ ಅಧಿಕೃತ ಗೇಳಿಕೆಗಳು ಕೇಳಿಬಂದಿಲ್ಲ.

Ashok Gehlot 1

ಬಂಡಾಯ ಶಾಸಕರ ಬೇಡಿಕೆ ಏನು?
ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಬಾರದು. ಏಕವ್ಯಕ್ತಿ ಏಕ ಹುದ್ದೆ ಎನ್ನುವುದಾದ್ರೆ ಈ 92 ಶಾಸಕರಲ್ಲಿ ಹಿರಿಯರನ್ನು ಅರ್ಹರನ್ನು ಸಿಎಂ ಮಾಡಬೇಕು. ಒಂದು ವೇಳೆ ಸಚಿನ್ ಪೈಲಟ್‌ಗೆ ಸಿಎಂ ಸ್ಥಾನ ನೀಡಿದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಶಾಸಕರು ಬೇಡಿಕೆ ಇಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *