Cricket
ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ನೆಹ್ರಾ ಆಯ್ಕೆ ಆಗಿದ್ದು ಹೇಗೆ?

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಗೆ ಆಶಿಶ್ ನೆಹ್ರಾ(38) ರನ್ನು ಅಯ್ಕೆ ಮಾಡಿ ಟೀಂ ಇಂಡಿಯಾ ಆಯ್ಕೆ ಸಮಿತಿ ಅಭಿಮಾನಿಗಳಲ್ಲಿ ಅಚ್ಚರಿಯನ್ನು ಮೂಡಿಸಿದೆ.
ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಫಿಟ್ ನೆಸ್ ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರೆ, ನೆಹ್ರಾ ಫಿಟ್‍ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು 8 ತಿಂಗಳ ಬಳಿಕ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ್ದಾರೆ.
ನೆಹ್ರಾ ಕಳೆದ ಐಪಿಎಲ್‍ನಲ್ಲಿ ಗಾಯಗೊಂಡು ಕೆಲವು ದಿನಗಳ ಕಾಲ ವಿಶ್ರಾಂತಿಯನ್ನು ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಕಮ್‍ಬ್ಯಾಕ್ ಮಾಡಿರುವ ನೆಹ್ರಾರ ವೃತ್ತಿ ಬದುಕಿನ ಸೆಕೆಂಡ್ ಇನಿಂಗ್ಸ್ ಆರಂಭವಾಗಿದೆ. ಕ್ರೀಡಾಂಗಣದಲ್ಲಿ ಅಪಾರ ಅನುಭವನ್ನು ಹೊಂದಿರುವ ನೆಹ್ರಾ ಯುವ ಬೌಲರ್‍ಗಳಿಗೆ ಉತ್ತಮ ಮಾರ್ಗದರ್ಶನ ನೀಡಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಟೀಮ್ ಹಿರಿಯ ಅಧಿಕಾರಿಯೊಬ್ಬರು ನೆಹ್ರಾ ಕಳೆದ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದು, ಫಿಟ್‍ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ವರ್ಷದ ಆರಂಭದಲ್ಲಿ ಇಂಗ್ಲೆಡ್ ವಿರುದ್ಧ ನಡೆದ ಸರಣಿಯಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಈ ಸರಣಿಯಲ್ಲಿ ಗಾಯಗೊಂಡ ನೆಹ್ರಾ ಅವರಿಗೆ ವೆಸ್ಟ್‍ಇಂಡಿಸ್ ಹಾಗೂ ಶ್ರೀಲಂಕಾ ವಿರುದ್ಧ ಸರಣಿಗಳಿಂದ ಕೆಲವು ದಿನಗಳ ಕಾಲ ವಿಶ್ರಾಂತಿಯನ್ನು ನೀಡಲಾಗಿತ್ತು. ಪ್ರಸ್ತುತ ಅವರು ಸಂಪೂರ್ಣ ಫಿಟ್ ಆಗಿದ್ದು ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ನೆಹ್ರಾ ಅವರು ಇದುವರೆಗೂ 26 ಟಿ-20 ಪಂದ್ಯಗಳನ್ನು ಆಡಿದ್ದು, 34 ವಿಕೆಟ್‍ಗಳನ್ನು ಪಡೆದಿದ್ದಾರೆ. ಮೈದಾನದಲ್ಲಿ ಉತ್ತಮ ಪ್ರದರ್ಶವನ್ನು ನೀಡಲು ವಯಸ್ಸಿಗೆ ಸಂಬಂಧವಿಲ್ಲ ಎಂದು 38 ವರ್ಷದ ನೆಹ್ರಾ ಸಾಬೀತುಪಡಿಸಿದ್ದಾರೆ. ನೆಹ್ರಾ ತಮ್ಮ ವೃತ್ತಿ ಬದುಕಿನಲ್ಲಿ ಎಂದೂ ಕೆಟ್ಟ ಪ್ರದರ್ಶನವನ್ನು ನೀಡಿ ತಂಡದಿಂದ ಹೊರಗುಳಿದಿರಲಿಲ್ಲ ಹೆಚ್ಚಿನ ಸಮಯ ಗಾಯ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದರು.
ಟಿ20 ಸರಣಿಗೆ ಯುವಿ ಕೈಬಿಟ್ಟಿದ್ದು ಯಾಕೆ: ಬಿಸಿಸಿಐ ವಿರುದ್ಧ ಅಭಿಮಾನಿಗಳು ಗರಂ
