ಶ್ರದ್ಧಾ ಕಪೂರ್ ಕಲ್ಯಾಣ ಫಿಕ್ಸ್!

Advertisements

ಮುಂಬೈ: ಬಾಲಿವುಡ್ ಆಶಿಕಿ ಬೆಡಗಿ, ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ಈ ವರ್ಷದ ಅಂತ್ಯ ಅಥವಾ ಮುಂದಿನ ವರ್ಷ ಮದುವೆ ಆಗಲಿದ್ದಾರೆ ಎಂಬ ತಾಜಾ ಸುದ್ದಿಯೊಂದು ಸಿನಿ ಅಂಗಳದಿಂದ ಹೊರಬಿದ್ದಿದೆ.

Advertisements

ತಮ್ಮ ಬಹುದಿನಗಳ ಗೆಳೆಯ, ಸೆಲೆಬ್ರಿಟಿಗಳ ಫೋಟೋಗ್ರಾಫರ್ ರೋಹನ್ ಶ್ರೇಷ್ಠ್ ಜೊತೆ ಮುಂದಿನ ವರ್ಷ ಅಥವಾ ಈ ವರ್ಷದ ಅಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಸಲಿದ್ದಾರೆ ಎಂಬ ವರದಿಯನ್ನು ಮಾಧ್ಯಮಗಳು ಬಿತ್ತರಿಸಿವೆ. ಇದೂವರೆಗೂ ಶ್ರದ್ಧಾ ಕಪೂರ್ ಅಥವಾ ರೋಹನ್ ಈ ಬಗ್ಗೆ ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ. 2018ರಿಂದಲೂ ಶ್ರದ್ಧಾ ಮತ್ತು ರೋಹನ್ ಡೇಟಿಂಗ್ ನಲ್ಲಿದ್ದಾರೆ.

Advertisements

ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸುತ್ತಿದ್ದಂತೆ ಶ್ರದ್ಧಾ ಫುಲ್ ಖುಷಿ ಮೂಡ್ ನಲ್ಲಿದ್ದಾರೆ. ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣದ ಬಳಿಕ ಒಂದು ವಿರಾಮ ತೆಗೆದುಕೊಂಡು ಮದುವೆ ಬಗ್ಗೆ ಪ್ಲಾನ್ ಮಾಡಿಕೊಳ್ಳಲಿದ್ದಾರೆ. ಸದ್ಯ ಸುಶಾಂತ್ ಸಿಂಗ್ ರಜಪೂತ್ ಜೊತೆ ‘ಛಿಛೇರ್’ ಮತ್ತು ಟಾಲಿವುಡ್ ನ ಪ್ರಭಾಸ್ ಅಭಿನಯದ ‘ಸಾಹೋ’ದಲ್ಲಿ ನಟಿಸುತ್ತಿದ್ದಾರೆ.

2018ರಲ್ಲಿ ಬಾಲಿವುಡ್ ನಟಿಯರಾದ ಸೋನಂ ಕಪೂರ್, ಪ್ರಿಯಾಂಕ ಚೋಪ್ರ ಮತ್ತು ದೀಪಿಕಾ ಪಡುಕೋಣೆ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವರ್ಷ ಸಹ ಆಲಿಯಾ ಭಟ್-ರಣ್‍ಬೀರ್ ಕಪೂರ್, ಫರ್ಹಾನ್ ಅಖ್ತರ್-ಶಿಬಾನಿ ದಾಂಡೇಕರ್ ಮತ್ತು ಮಲೈಕಾ ಅರೋರಾ-ಅರ್ಜುನ್ ಕಪೂರ್ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Advertisements
Exit mobile version