ಶ್ರೀಲೀಲಾಗೆ ಠಕ್ಕರ್, ನಾಗಾರ್ಜುನಗೆ ಆಶಿಕಾ ರಂಗನಾಥ್ ನಾಯಕಿ

Public TV
1 Min Read
ASHIKA RANGANATH

ನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath) ಇದೀಗ ಟಾಲಿವುಡ್‌ನತ್ತ (Tollywood) ಮುಖ ಮಾಡಿದ್ದಾರೆ. ‘ಅಮಿಗೋಸ್’ ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಬೆನ್ನಲ್ಲೇ ಸ್ಟಾರ್ ನಟ ನಾಗಾರ್ಜುನಗೆ ಆಶಿಕಾ ನಾಯಕಿಯಾಗಿ ನಟಿಸುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಈ ಮೂಲಕ ಬೇಡಿಕೆಯಲ್ಲಿರೋ ಶ್ರೀಲೀಲಾಗೆ (Sreeleela) ಆಶಿಕಾ ಠಕ್ಕರ್ ಕೊಟ್ಟಿದ್ದಾರೆ.

ashika ranganath 2

ಆಶಿಕಾ ರಂಗನಾಥ್‌ಗೆ ಅಷ್ಟಾಗಿ ಕನ್ನಡದ ಚಿತ್ರಗಳು ಕೈಹಿಡಿಯುತ್ತಿಲ್ಲ. ಇದೀಗ ಎಲ್ಲರಂತೆ ಪಟಾಕಿ ಪೋರಿ ಕೂಡ ತೆಲುಗಿಗೆ ಹಾರಿದ್ದಾರೆ. ಟಾಲಿವುಡ್‌ನಲ್ಲಿ ಗೆದ್ದು ನಿಲ್ಲಲು ನಟಿ ಗಟ್ಟಿ ಮನಸ್ಸು ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ರುಕ್ಮಿಣಿ ವಸಂತ್, ಸಪ್ತಮಿ ಗೌಡ ಬಳಿಕ ಆಶಿಕಾ ರಂಗನಾಥ್ ಕೂಡ ಆ ಸಾಲಿಗೆ ಸೇರಿಕೊಂಡಿದ್ದಾರೆ. ಇದನ್ನೂ ಓದಿ:ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಸಿನಿಮಾದ ಟೀಸರ್ ರಿಲೀಸ್

ashika ranganath 1ಟಾಲಿವುಡ್ ಕಿಂಗ್ ನಾಗಾರ್ಜುನಗೆ (Nagarjuna) ಆಶಿಕಾ ನಾಯಕಿಯಾಗಿದ್ದಾರೆ. ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಚಿತ್ರದಲ್ಲಿ ವರಲಕ್ಷ್ಮಿ ಎಂಬ ಪಾತ್ರಕ್ಕೆ ಆಶಿಕಾ ಜೀವ ತುಂಬಲಿದ್ದಾರೆ. ವಿಜಯ್ ಬಿನ್ನಿ ನಿರ್ದೇಶನ ಮಾಡಿದ್ರೆ, ಚಿತ್ರಕ್ಕೆ ಎಂ.ಎಂ ಕೀರವಾಣಿ ಸಂಗೀತವಿದೆ. ಈ ಸಿನಿಮಾಗೆ ಶ್ರೀನಿವಾಸ ಚಿಟ್ಟೂರಿ ನಿರ್ಮಾಣ ಮಾಡುತ್ತಿದ್ದಾರೆ.

60 ವರ್ಷವಾಗಿದ್ರೂ ಇನ್ನೂ ಚಾರ್ಮ್ ಉಳಿಸಿಕೊಂಡಿರೋ ನಾಗಾರ್ಜನಗೆ ಆಶಿಕಾ ನಾಯಕಿಯಾಗಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇಬ್ಬರ ಜೋಡಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ. ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ.

ತೆಲುಗಿನಲ್ಲಿ ಕನ್ನಡದ ನಟಿ ಮಣಿಯರೇ ಮಿಂಚುತ್ತಿರೋ ಈ ಟೈಮ್‌ನಲ್ಲಿ ಅದರಲ್ಲೂ ಶ್ರೀಲೀಲಾ ಜಮಾನ ಇರೋವಾಗಲೇ ಆಶಿಕಾ ಎಂಟ್ರಿ ಕೊಟ್ಟಿರೋದು ಅಭಿಮಾನಿಗಳಿಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಕನ್ನಡದ ನಟಿಮಣಿಯರ ಮುಂದೆ ಜಾಗ ಗಟ್ಟಿ ಮಾಡಿಕೊಂಡು ತೆಲುಗು ಪ್ರೇಕ್ಷಕರ ಮನಗೆಲ್ಲುತ್ತಾರಾ ಕಾದುನೋಡಬೇಕಿದೆ.

Share This Article