ಚಂದನವನದ ಚುಟು ಚುಟು ಖ್ಯಾತಿಯ ಆಶಿಕಾ ರಂಗನಾಥ್ ಬಹುಬೇಡಿಕೆಯಲ್ಲಿ ಇರುವಾಗಲೇ ಮದುವೆ ಆಗುತ್ತಿರುವ ಸುದ್ದಿ ಕೊಟ್ಟು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ನಟನೆ, ಡಾನ್ಸ್ ಮೂಲಕ ಹೆಚ್ಚು ಫೇಮಸ್ ಆದ ಇವರು, ಕಡಿಮೆ ಸಮಯದಲ್ಲಿಯೇ ಹೆಚ್ಚು ಅಭಿಮಾನಿ ಬಳಗ ಪಡೆದುಕೊಂಡರು. ಆದರೆ ಈಗ ಆಶಿಕಾ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಚಂದನವನದಲ್ಲಿ ಹರಿದಾಡುತ್ತಿದೆ.
ಇಷ್ಟು ಬೇಗ ಆಶಿಕಾ ಅವರಿಗೆ ಕಂಕಣ ಭಾಗ್ಯ ಕೂಡಿಬಂತಾ ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೌದು, ಆಶಿಕಾ ಇದೇ ವರ್ಷವೇ ಮದುವೆಯಾಗುವ ಎಲ್ಲ ಸಾಧ್ಯತೆಗಳು ಇವೆ. ಈ ಕುರಿತು ಅವರೇ ಅಧಿಕೃತವಾಗಿ ಸ್ವಲ್ಪದಿಗಳಲ್ಲಿ ತಿಳಿಸುತ್ತಾರೆ ಎಂದು ಅವರ ಆಪ್ತ ಬಳಗದಿಂದ ತಿಳಿದುಬಂದಿದೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ
ಆಶಿಕಾ ಕೈ ಹಿಡಿಯುವ ಅದೃಷ್ಟವಂತ ಹುಡುಗ ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಆಶಿಕಾ ಮನೆಯವರೇ ನೋಡಿದ ಹುಡುಗನ ಜತೆ ಚುಟುಚುಟು ಹುಡುಗಿ ಹಸೆಮಣೆ ಏರಲಿದ್ದಾರೆ ಎನ್ನುವುದು ಅಸಲಿ ಕಹಾನಿ. ಹುಡುಗ ಬ್ಯುಸಿನೆಸ್ ಮ್ಯಾನ್ ಆಗಿರುವುದು ಇನ್ನೂ ಲೆಟೆಸ್ಟ್ ನ್ಯೂಸ್.
ಈ ಹುಡುಗ ಆಶಿಕಾ ಕುಟುಂಬಕ್ಕೆ ತುಂಬಾ ಪರಿಚಯವಿದ್ದ ಹಿನ್ನೆಲೆ ಕುಟುಂಬದವರೇ ಆಗಿದ್ದಾರೆ. ಹಾಗಾಗಿ ಹುಡುಗನನ್ನು ನೋಡಿ ಮಾತುಕತೆ ಮಾಡಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ. ಹುಡುಗನ ಹೆಸರು ಮತ್ತು ಮದುವೆ ದಿನಾಂಕ ಸದ್ಯದಲ್ಲೇ ತಿಳಿಸಲಿದೆ ಆಶಿಕಾ ಕುಟುಂಬ. ಇದನ್ನೂ ಓದಿ: ʼಆರ್‌ಆರ್‌ಆರ್ʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಮಿಲಿಯನ್ ದಾಖಲೆ
ಮೊದಲು ಈ ಜೋಡಿಯ ನಿಶ್ವಿತಾರ್ಥ ನೆರವೇರಲಿದ್ದು, ನಂತರ ವಿಜೃಂಭಣೆಯಿಂದ ಮದುವೆ ನಡೆಯಲಿದೆ. ಇದೇ ಡಿಸೆಂಬರ್ ನಲ್ಲಿ ಆಶಿಕಾ ಅವರ ನಿಶ್ವಿತಾರ್ಥ ಫಿಕ್ಸ್ ಆಗುವ ಸಾಧ್ಯತೆ ಇದೆ.