ಬೆಂಗಳೂರು: ಮುಗುಳುನಗೆ ಚಿತ್ರದ ನಾಯಕಿಯರಲ್ಲೊಬ್ಬರಾಗಿದ್ದ ಆಶಿಕಾ ರಂಗನಾಥ್ ಆ ನಂತರದಲ್ಲಿ ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ಆಶಿಕಾ ಕೈ ತುಂಬಾ ಈಗ ಅವಕಾಶಗಳ ಸಂತೆ. ಪೂರ್ಣಪ್ರಮಾಣದ ನಾಯಕಿಯಾಗಿ ಗುರುತಿಸಿಕೊಂಡಿರೋ ಆಶಿಕಾ ಇದೀಗ ತಾಯಿಗೆ ತಕ್ಕ ಮಗ ಚಿತ್ರದ ಚಿತ್ರೀಕರಣ ಕಂಪ್ಲೀಟಾದ ಖುಷಿಯಲ್ಲಿದ್ದಾರೆ!
ಖ್ಯಾತ ನಿರ್ದೇಶಕ ಶಶಾಂಕ್ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಶುರು ಮಾಡಿರುವ ಬ್ಯಾನರಿನಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ತಾಯಿಗೆ ತಕ್ಕ ಮಗ. ಅಜೇಯ್ ರಾವ್ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಇದುವರೆಗಿನ ಚಿತ್ರಗಳಿಗಿಂತಲೂ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದನ್ನೂ ಓದಿ: ತಾಯಿಗೆ ತಕ್ಕ ಮಗ ಸಿನಿಮಾ ಸೆಟ್ ಗೆ ತೆರಳಿ ಪತ್ನಿ ಸುಮಲತಾಗೆ ಸರ್ಪ್ರೈಸ್ ಕೊಟ್ಟ ರೆಬೆಲ್ ಅಂಬಿ
Advertisement
Advertisement
Advertisement
ಇದೀಗ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಆಶಿಕಾ ತಾಯಿಗೆ ತಕ್ಕ ಮಗ ಚಿತ್ರದ ಬಗೆಗಿನ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ನಾಯಕ ಅಜೇಯ್ ರಾವ್ ಮತ್ತು ಸುಮಲತಾ ಅವರೊಂದಿಗಿನ ಫೋಟೋ ಒಂದನ್ನು ಪ್ರಕಟಿಸಿರುವ ಆಶಿಕಾ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾದ ಸುದ್ದಿಯನ್ನು ಅಧಿಕೃತವಾಗಿಯೇ ಘೋಷಿಸಿದ್ದಾರೆ. ಇದನ್ನೂ ಓದಿ: ನಟಿ ಸುಮಲತಾ ಅಂಬರೀಶ್ ಟ್ಯಾಟೋ ಹಾಕಿಸಿಕೊಂಡ ಸ್ಯಾಂಡಲ್ವುಡ್ ಕೃಷ್ಣ
Advertisement
ರ್ಯಾಂಬೋ 2 ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿದ್ದ ಆಶಿಕಾ ರಂಗನಾಥ್ ಆ ಚಿತ್ರದ ಚೆಂದದ ನಟನೆಯ ಮೂಲಕ ಮತ್ತಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ನಟನೆ, ಸೌಂದರ್ಯ ಎಲ್ಲದರಲ್ಲಿಯೂ ಪೈಪೋಟಿ ನೀಡುವಂತಿರೋ ಆಶಿಕಾ ಕನ್ನಡ ಚಿತ್ರರಂಗದಲ್ಲಿ ಮೆಲ್ಲಗೆ ಮುಖ್ಯ ನಾಯಕಿಯಾಗಿ ನೆಲೆಗೊಳ್ಳುತ್ತಿದ್ದಾರೆ!