ಉಡುಪಿ: ತಿರುವನಂತಪುರಂನ ಬಿಜೆಪಿಯ ಉಪಮೇಯರ್ ಆಶಾ ನಾಥ್ (Asha Nath) ಅವರು ಉಡುಪಿ ಕೃಷ್ಣ ಮಠಕ್ಕೆ (Udupi Sri Krishna Matha) ಭೇಟಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿಯಿಂದ ಆಯ್ಕೆಯಾಗಿ ಆಶಾ ನಾಥ್ ದೇಶದ ಗಮನ ಸೆಳೆದಿದ್ದರು. ಕುಟುಂಬ ಸಮೇತರಾಗಿ ಬಂದು ಉಡುಪಿ ಕೃಷ್ಣ ದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಯಶವಂತಪುರದಲ್ಲಿ ಟೆಕ್ಸ್‌ಟೈಲ್ ಮಾರ್ಕೆಟ್, ಸಿಎಂ ಜೊತೆ ಚರ್ಚಿಸಿ ಶಂಕುಸ್ಥಾಪನೆ: ಶಿವಾನಂದ ಪಾಟೀಲ್
View this post on Instagram
ತಿರುವನಂತಪುರದಲ್ಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಕೃಷ್ಣ ದರ್ಶನದ ಬಳಿಕ ಪರ್ಯಾಯ ಮಠಾಧೀಶರನ್ನು ಉಪಮೇಯರ್ ಭೇಟಿಯಾದರು.

ಉಡುಪಿ ಶ್ರೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರೊಂದಿಗೆ ಮಾತುಕತೆ ನಡೆಸಿದರು. ಮಠದ ವತಿಯಿಂದ ನೂತನ ಉಪಮೇಯರಿಗೆ ಗೌರವ ಅರ್ಪಣೆ ಮಾಡಲಾಯಿತು. ಇದನ್ನೂ ಓದಿ: ಕೆಆರ್ ಮಾರುಕಟ್ಟೆ ವ್ಯಾಪಾರಿಗಳು ಥಂಡಾ – ಮೂಟೆಗಟ್ಟಲೇ ತರಕಾರಿಗಳು ಈಗ ಕಸದ ಗಾಡಿಗೆ!

