`ರಾಬರ್ಟ್’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಟಿ ಆಶಾ ಭಟ್. ಕನ್ನಡದ ಮೊದಲ ಚಿತ್ರದಲ್ಲೇ ಭರವಸೆಯ ನಟಿಯಾಗಿ ಗುರುತಿಸಿಕೊಂಡ್ರು. ನಟಿಯಾಗಿ ಮತ್ತು ಗಾಯಕಿಯಾಗಿ ಸೌಂಡ್ ಮಾಡ್ತಿರೋ `ರಾಬರ್ಟ್’ ಬ್ಯೂಟಿ ಆಶಾ, ತಮ್ಮ ಜೀವನದಲ್ಲಿ ಇವರು ನನ್ನ ಸ್ಫೂರ್ತಿ ಎಂದು ಸುಧಾಮೂರ್ತಿ ಅವರ ಜತೆಗಿನ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ನಟಿ ಆಶಾ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್ ಆಗ್ತಿದೆ.
`ಕಣ್ಣು ಹೊಡೆಯಾಕ’ ಅಂತಾ ಹೇಳ್ತಾ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಆಶಾ, ಬಾಲಿವುಡ್ ಜಂಗ್ಲಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಬಳಿಕ ಕನ್ನಡ ಚಿತ್ರದ ಮೂಲಕ ಹವಾ ಕ್ರಿಯೇಟ್ ಮಾಡಿದ್ರು. ಆಕ್ಟಿಂಗ್ ಮತ್ತು ಡ್ಯಾನ್ಸ್ಗಷ್ಟೇ ತಾನು ಸೀಮಿತವಲ್ಲ ಗಾಯಕಿಯಾಗಿಯೂ ಸೈ ಅಂತಾ ಪ್ರೂವ್ ಮಾಡಿದ್ರು. ನಟಿ ಆಶಾ ಇಂದು ದೆಹಲಿಯ ಈವೆಂಟ್‌ವೊಂದರಲ್ಲಿ ಸುಧಾಮೂರ್ತಿ ಅವರನ್ನು ಭೇಟಿಯಾಗಿದ್ದಾರೆ. ತಮ್ಮ ಬದುಕಿನಲ್ಲಿ ಸುಧಾಮೂರ್ತಿ ಅದೆಷ್ಟರ ಮಟ್ಟಿಗೆ ಸ್ಫೂರ್ತಿ ಎಂಬುದರ ಕುರಿತು ಇನ್ಸಾ÷್ಟಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೇರಳದಲ್ಲೂ ಯಶ್ ಹವಾ: ಟಾಪ್ 3ನೇ ಸ್ಥಾನದಲ್ಲಿ ಕೆಜಿಎಫ್ 2
View this post on Instagram
ಇದೀಗ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಅವರ ಜತೆಗಿನ ಫೋಟೋ ಶೇರ್ ಮಾಡಿ, ಸುಧಾಮೂರ್ತಿ ಒಬ್ಬರು ಶ್ರೇಷ್ಠ ಮಹಿಳೆ, ನನಗೆ ಸ್ಫೂರ್ತಿ ನೀಡಲು ಎಂದಿಗೂ ವಿಫಲವಾಗದ ವ್ಯಕ್ತಿ. ಅವರ ಗುಣ ಮತ್ತು ನಡತೆ ನನಗೆ ಬೆರಗುಗೊಳಿಸುತ್ತದೆ ಎಂದು ತಮ್ಮ ನೆಚ್ಚಿನ ವ್ಯಕ್ತಿಯ ಬಗ್ಗೆ ಆಶಾ ಭಟ್ ಮೆಚ್ಚಗೆಯ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.