ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

Public TV
1 Min Read
ASHA BHAT

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಆಶಾ ಭಟ್ ಕುಚ್ಚಲಕ್ಕಿ ರೊಟ್ಟಿ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ASHA BHAT 1

ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳಬಲ್ಲವನು ಶ್ರೀಮಂತ. ಪ್ರತಿ ಬಾರಿ ನಾನು ಒಳ್ಳೆಯ ಭಾವನೆಯನ್ನು ಅನುಭವಿಸುತ್ತೇನೆ. ನಾನು ನನ್ನ ಜನರ ಹತ್ತಿರ ಬಂದಿದ್ದೇನೆ. ತಾಜಾ ಗಾಳಿಯ ಉಸಿರು, ತಾಜಾ ದೃಷ್ಟಿಕೋನವನ್ನು ನಾನು ಮರಳಿ ಪಡೆಯುತ್ತಿದ್ದೇನೆ. ಒಂದು ಕಪ್ ಫಿಲ್ಟರ್ ಕಾಫಿ ಕುಡಿಯುವುದು, ಕಾಡಿನಲ್ಲಿ ನಡೆಯುವುದು, ಹೊಸದನ್ನು ಕಲಿಯುವುದು, ಪ್ರಕೃತಿಯ ಶಬ್ದಗಳನ್ನು ಕೇಳುವುದು ನನಗೆ ಅಪಾರ ಸಂತೋಷವನ್ನು ತರುತ್ತದೆ ಎಂದು ಬರೆದುಕೊಂಡು ಕುಚ್ಚಲಕ್ಕಿ ರೊಟ್ಟಿಯನ್ನು ತಾವು ಮಾಡುತ್ತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Asha Bhat (@asha.bhat)

ಈ ವೀಡಿಯೋದಲ್ಲಿ ಆಶಾ ಭಟ್ ಅವರು ಒಲೆಯ ಮೇಲೆ ರೊಟ್ಟಿಯನ್ನು ಮಾಡುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಮ್ಮ ಹವ್ಯಕ ಕುಸು ತುಂಬಾನೇ ಸಿಂಪಲ್. ಎಲ್ಲೇ ಹೋದರು ಹೀಗೆ ಇರು. ನಮ್ಮ ಸಂಪ್ರದಾಯ ಉಳಿಸಿ ಬೆಳೆಸೋಣ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಾ ನಟಿಯ ಪೋಸ್ಟ್‍ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

asha bhat medium

ಕೆಲವು ದಿನಗಳ ಹಿಂದೆ ಆಶಾ ಭಟ್ ಅವರು ತಮ್ಮ ಹಳ್ಳಿಯಲ್ಲಿ ಮಕ್ಕಳು ಮತ್ತು ತಮ್ಮ ಸ್ನೇಹಿತರ ಜೊತೆಗೆ ಚಿನ್ನಿಕೋಲು ಆಟವಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದರು. ರಾಬರ್ಟ್ ಚಿತ್ರದ ಮೂಲಕ ಮೊದಲನೆಯದಾಗಿ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದರು. ಇವರು ಕೇವಲ ಒಂದು ಕನ್ನಡ ಸಿನಿಮಾದಿಂದಲೇ ಸಾಕಷ್ಟು ಜನಪ್ರಿಯ ಆದರು ಮತ್ತು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ನಟಿ ಆಶಾ ಭಟ್ ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ ಇವರು ಮಾಡೆಲ್ ಆಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *