ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಆಶಾ ಭಟ್ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಅವರನ್ನು ಭೇಟಿಯಾಗಿದ್ದಾರೆ. ಈ ಸುಂದರ ಕ್ಷಣಗಳ ಕುರಿತಾಗಿ ಆಶಾ ಭಟ್ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಪರಿಸರ ದಂತಕತೆಗಳ ನಡುವೆ ನಾವಿರುವುದು ನಮ್ಮ ಪುಣ್ಯವಾಗಿದ್ದು, ನಾನು ಹಿರಿಯರ ಆಶೀರ್ವಾದ ಪಡೆದಿದ್ದೇನೆ. ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಅವರ ಜೊತೆಗೆ ಕೆಲವು ಕ್ಷಣ ಕಳೆದಿದ್ದೇನೆ. ತಿಮ್ಮಕ್ಕ ಅವರು ಮರಗಳ ತಾಯಿ, ತನ್ನ ಹಸಿರು ಪ್ರಪಂಚದ ದೃಷ್ಟಿಯಲ್ಲಿ ಬದುಕಿದ ಹಸಿರು ಕ್ರಾಂತಿಯ ಸೂಪರ್ ಹೀರೋ ಆಗಿದ್ದಾರೆ. ತುಳಸಿ ಗೌಡ, ಯಾವುದೇ ಜಾತಿಯ ತಾಯಿ ಮರವನ್ನು ಗುರುತಿಸುವ ಸಾಮರ್ಥ್ಯಕ್ಕಾಗಿ ಎನ್‍ಸೈಕ್ಲೋಪೀಡಿಯಾ ಆಫ್ ಫಾರೆಸ್ಟ್ ಎಂದೂ ಕರೆಯುತ್ತಾರೆ. ಅವರ ಜ್ಞಾನದ ಬೆಳಕಿನಲ್ಲಿ ಇರುವುದು ಒಂದು ಆಶೀರ್ವಾದವಾಗಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್
View this post on Instagram
ಒಬ್ಬ ಮಹಿಳೆಯಾಗಿ ನಾನು ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಅನನ್ಯವಾಗಿ ನೀವು, ನಮ್ಮ ಪರಂಪರರೆಯ ಕಿರೀಟವಾಗಿ ಅಳವಡಿಸಿಕೊಳ್ಳುವುದು ಮತ್ತು ಸಾಗುವುದು ಒಳ್ಳೆಯದು ಎಂದು ಬರೆದುಕೊಂಡು ಹಿರಿಯ ಜೀವಗಳಿಂಮ ಆಶಿರ್ವಾದ ಪಡೆದಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪನ Birthdayಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಐರಾ, ಯಥರ್ವ್
ನಟಿ ಹಂಚಿಕೊಂಡಿರುವ ಚಿತ್ರಗಳು ಹಾಗೂ ಅವರ ಮಾತುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆಶಾ ಭಟ್ ರಾಬರ್ಟ್ ಚಿತ್ರದಲ್ಲಿನ ಅಭಿನಯದಿಂದ ಎಲ್ಲರ ಮನಗೆದ್ದಿದ್ದಾರೆ. ಹಳ್ಳಿಯ ಸೊಗಡಿನಲ್ಲಿ ಬೆಳೆದಿರುವ ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮೂರಿನ ಸೊಗಡಿನ ಕುರಿತಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.