ಸ್ಯಾಂಡಲ್‌ವುಡ್‌ನ `ರಾಬರ್ಟ್’ ನಟಿ ಆಶಾ ಭಟ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾ, ಫೋಟೋಶೂಟ್ ಅಂತಾ ಒಂದಲ್ಲಾ ಒಂದು ವಿಚಾರದಿಂದ ಸುದ್ದಿಯಾಗೋ ನಟಿ ಆಶಾ ಭಟ್ ಈಗ ಬ್ಯುಸಿ ಲೈಫ್‌ಗೆ ಸ್ವಲ್ಪ ಬ್ರೇಕ್ ಕೊಟ್ಟು, ಜೈಪುರ ಸುಂದರ ತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.
View this post on Instagram
ಬಾಲಿವುಡ್‌ನ `ಜಂಗ್ಲಿ’ ಚಿತ್ರದ ನಂತರ ಕನ್ನಡದ `ರಾಬರ್ಟ್’ ಚಿತ್ರದಲ್ಲಿ ಮಿರ ಮಿರ ಅಂತಾ ಮಿಂಚಿದ ಮೇಲೆ ತಮ್ಮ ಗಾಯನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದರು. ಈಗ ಒಂದಿಷ್ಟು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರೋ ಬೆನ್ನಲ್ಲೇ ಜೈಪುರ ಪ್ರವಾಸಕ್ಕೆ ತೆರಳಿದ್ದಾರೆ. ಜೈಪುರದ ಸುಂದರ ಪ್ರದೇಶಗಳಿಗೆ ನಟಿ ಆಶಾ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಸಮಂತಾ ಮಿಸ್ಸಿಂಗ್?
View this post on Instagram
ಇನ್ನು `ರಾಬರ್ಟ್’ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಸಕ್ಸಸ್ ಕಂಡಿದ್ರು. ಆಶಾ ಭಟ್ ಅವರ ಮುಂದಿನ ಚಿತ್ರದ ಬಗ್ಗೆ ಯಾವ ಅಪ್‌ಡೇಟ್ ಕೂಡ ಅಭಿಮಾನಿಗಳಿಗೆ ಸಿಕ್ಕಿಲ್ಲ. ಇನ್ನು ಪ್ರತಿಷ್ಠಿತ ಬ್ಯಾನರ್ ಜತೆಗೆ ಒಂದೊಳ್ಳೆ ಸಿನಿಮಾಗೆ ಆಶಾ ಭಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರತಂಡದ ಅಧಿಕೃತ ಘೋಷಣೆಗೆ ಕಾಯ್ತಿದ್ದಾರೆ. ರಾಬರ್ಟ್ ಬ್ಯೂಟಿ ಆಶಾ ಲಿಸ್ಟ್‌ನಲ್ಲಿ ಕೈತುಂಬಾ ಸಿನಿಮಾಗಳಿವೆ. ಕೆಲವೇ ದಿನಗಳಲ್ಲಿ ಹೊಸ ಚಿತ್ರದ ಕುರಿತು ಗುಡ್ ನ್ಯೂಸ್ ನೀಡಲಿದ್ದಾರೆ.