ಮೆಲ್ಬರ್ನ್: ವಿಶ್ವ ನಂಬರ್ 1 ಟೆನ್ನಿಸ್ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ ಬಾರ್ಟಿ 25ರ ಹರೆಯದಲ್ಲೇ ಟೆನ್ನಿಸ್‍ಗೆ ವಿದಾಯ ಘೋಷಿಸಿದ್ದಾರೆ.
Advertisement
ಇತ್ತಿಚೇಗೆ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಸಿದ್ದರು. ಈ ಮೂಲಕ 44 ವರ್ಷಗಳ ಬಳಿಕ ತವರಿನ ಪ್ರಶಸ್ತಿ ಬರವನ್ನು ನೀಗಿಸಿದ್ದರು. ವೃತ್ತಿಪರ ಟೆನ್ನಿಸ್‍ನಲ್ಲಿ ಉತ್ತಂಗದಲ್ಲಿದ್ದ ಬಾರ್ಟಿ ಇದೀಗ ವಿದಾಯ ಘೋಷಿಸಿ ಟೆನ್ನಿಸ್ ಅಂಗಳದಿಂದ ದೂರಸರಿದಿದ್ದಾರೆ. ಇದನ್ನೂ ಓದಿ: 44 ವರ್ಷಗಳ ಬಳಿಕ ಆಸ್ಟ್ರೇಲಿಯಾ ಓಪನ್ ಗೆದ್ದು ತವರಿನ ಪ್ರಶಸ್ತಿ ಬರ ನೀಗಿಸಿದ ಆಶ್ ಬಾರ್ಟಿ
Advertisement
Advertisement
ಈ ಬಗ್ಗೆ ವೀಡಿಯೋ ಮೂಲಕ ಸ್ಪಷ್ಟಪಡಿಸಿರುವ ಬಾರ್ಟಿ, ಇಂದು ನಾನು ವೃತ್ತಿಪರ ಟೆನ್ನಿಸ್‍ಗೆ ವಿದಾಯ ಘೋಷಿಸಲು ನಿರ್ಧರಿಸಿದ್ದು, ತುಂಬಾ ಭಾವುಕಳಾಗಿದ್ದೇನೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ತುಂಬಾ ಯೋಚನೆ ಮಾಡಿ ಈ ತೀರ್ಮಾನಕ್ಕೆ ಬಂದಿದ್ದೇನೆ. ನನಗೆ ಕ್ರೀಡೆ ಎಲ್ಲವನ್ನು ಕೊಟ್ಟಿದೆ. ತುಂಬಾ ಹೆಮ್ಮೆಯಿಂದ ಈ ಹಿಂದಿನ ಸುಂದರ ಕ್ಷಣಗಳನ್ನು ನೆನಪಿಸಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ
Advertisement
View this post on Instagram
2022ನೇ ವರ್ಷದ ಮೊದಲ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸಿದ್ದ ಆಶ್ ಬಾರ್ಟಿ ಈ ಹಿಂದೆ 2019ರಲ್ಲಿ ಫ್ರೆಂಚ್ ಓಪನ್, 2021ರಲ್ಲಿ ವಿಂಬಲ್ಡ್ ಪ್ರಶಸ್ತಿ ಗೆದ್ದು, ತಮ್ಮ ವೃತ್ತಿ ಜೀವನದಲ್ಲಿ 3 ಗ್ರ್ಯಾನ್ ಸ್ಲಾಂ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದರು. ಬಾರ್ಟಿ ಈ ಹಿಂದೆ ಟೆನ್ನಿಸ್‍ನಿಂದ ದೂರ ಸರಿದು ಕ್ರಿಕೆಟ್ ಆಟಗಾರ್ತಿಯಾಗಿದ್ದರು. ಆಸ್ಟ್ರೇಲಿಯಾದ ಬಿಗ್‍ಬಾಶ್ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಆಡಿ ಮಿಂಚಿದ್ದರು. ಬಳಿಕ ಟೆನಿಸ್ ಕಡೆ ಮತ್ತೆ ಆಕರ್ಷಿತರಾದ ಬಾರ್ಟಿ ಟೆನಿಸ್‍ನಲ್ಲಿ ಸಾಧನೆಯ ಉತ್ತಂಗದಲ್ಲಿದ್ದ ವೇಳೆಯೆ ಟೆನ್ನಿಸ್‍ಗೆ ವಿದಾಯ ಘೋಷಿಸಿದ್ದಾರೆ.