ಗಾಂಧಿನಗರ: 2013ರ ಅತ್ಯಾಚಾರ ಪ್ರಕರಣದರಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ (81) (Asaram Bapu) ಗುಜರಾತ್‌ನ ಸೆಷನ್ಸ್ ನ್ಯಾಯಾಲಯವು (Gujarat Sessions Court) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಕೆ. ಸೋನಿ (DK Soni) ಅವರು ವಾದ-ವಿವಾದ ಆಲಿಸಿದ ನಂತರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ವಿಸ್ತಾರ ವಿಮಾನದಲ್ಲಿ ಅರೆಬೆತ್ತಲಾಗಿ ಓಡಾಡಿದ ಮಹಿಳೆ – ಗಲಾಟೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ
Advertisement
Advertisement
2013ರಲ್ಲಿ ತನ್ನ ಶಿಷ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ 81 ವರ್ಷದ ಅಸಾರಾಂ ಬಾಪುವನ್ನು ದೋಷಿ ಎಂದು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಹುಡುಗಿಯರೇ.. ಮದುವೆಗೂ ಮುನ್ನ ಭಾವಿ ಪತಿಗೆ ಈ ಪ್ರಶ್ನೆ ಕೇಳೋದನ್ನ ಮರಿಬೇಡಿ
Advertisement
ಸೋಮವಾರ ವಿಚಾರಣೆ ನಡೆಸಿದ್ದ ಗಾಂಧಿನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2013ರ ಈ ಪ್ರಕರಣದಲ್ಲಿ ಅಸಾರಾಂ ಬಾಪುವಿನ ಪತ್ನಿ ಸೇರಿ ಪ್ರಕರಣದ ಆರೋಪಿಗಳಾಗಿದ್ದ 6 ಮಂದಿಯನ್ನ ಖುಲಾಸೆಗೊಳಿಸಿತು. ಪೂರಕ ಸಾಕ್ಷ್ಯಾಧಾರ ಇಲ್ಲದ ಕಾರಣ ಐವರು ಆರೋಪಿಗಳನ್ನು ಖುಲಾಸೆಗೊಳಿಸಿತು. ಇದರಲ್ಲಿ ಅಸಾರಾಂ ಬಾಪುವಿನ ಪತ್ನಿಯೂ ಸೇರಿದ್ದಾರೆ.
Advertisement
ನಂತರ ನ್ಯಾಯಾಧೀಶರಾದ ಡಿ.ಕೆ ಸೋನಿ ಅವರು, ಐಪಿಸಿ (IPC) ಸೆಕ್ಷನ್ 376 (2)(ಸಿ) (ಬಲವಂತವಾಗಿ ಸಂಭೋಗ ಹಾಗೂ ತನ್ನ ಅಭಿರಕ್ಷೆಯಲ್ಲಿರುವ ಸ್ತ್ರೀಯೊಡನೆ ಸಂಭೋಗ ಮಾಡುವುದು), 377 (ಅಸ್ವಾಭಾವಿಕ ಲೈಂಗಿಕತೆ), 342 (ಅಕ್ರಮ ಬಂಧನಕ್ಕಾಗಿ ದಂಡನೆ), 506 (2) (ಅಪರಾಧಿಕ ಭಯೋತ್ಪಾದಕರಿಗೆ ದಂಡನೆ), 354 (ಮಹಿಳೆಯನ್ನು ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ), 357 (ಒಬ್ಬ ವ್ಯಕ್ತಿಯನ್ನು ಅಕ್ರಮವಾಗಿ ಬಂಧನದಲ್ಲಿಡುವ ಪ್ರಯತ್ನದಲ್ಲಿ ಅವನ ಮೇಲೆ ಹಲ್ಲೆ) ಅಡಿಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಸಾರಾಂ ಬಾಪು ಈಗಾಗಲೇ ಎರಡು ಪ್ರತ್ಯೇಕ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. 2013 ರಲ್ಲಿ ಅವನನ್ನು ಇಂದೋರ್‌ನಿಂದ ಕರೆತಂದು 2018 ರಿಂದ ಜೋಧ್‌ಪುರದ ಜೈಲಿನಲ್ಲಿ ಇರಿಸಲಾಗಿದೆ.
2013ರಲ್ಲಿ ರಾಜಸ್ಥಾನದ ತನ್ನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಇನ್ನೊಂದು ಪ್ರಕರಣದಲ್ಲಿ ಇದೀಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k