ಬೆಂಗಳೂರು: ಅಸನಿ ಚಂಡಮಾರುತದ ಎಫೆಕ್ಟ್ ರಾಜ್ಯದಲ್ಲಿ ವ್ಯಾಪಕ ಮಳೆ ಆಗ್ತಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ.
Advertisement
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮೇಶ್ವರ ಬಂಡೆ ಗ್ರಾಮದಲ್ಲಿ ಮರ ಬಿದ್ದು ಇಬ್ಬರಿಗೆ ಗಂಭೀರ ಗಾಯ. ಅಲ್ಲದೇ ಮನೆಯ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ಹಾಗೂ ಬೈಕ್ ಮೇಲೆ ಮರ ಬಿದ್ದಿದೆ. ಭತ್ತ, ಮಾವು, 14 ಎಕರೆಯ ಪಪ್ಪಾಯ ಬೆಳೆಗಳ ಸಂಪೂರ್ಣ ಹಾನಿ ಆಗಿದೆ.
Advertisement
Advertisement
ಕೊಪ್ಪಳದಲ್ಲಿ ಅರ್ಧಗಂಟೆ ಸುರಿದ ಮಳೆಗೆ ಮನೆಯ ತಗಡುಗಳು ಹಾರಿ ಹೋಗಿದೆ. ಕೊಪ್ಪಳ ತಾಲೂಕಿನ ಟನಕನಕಲ್ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದೆ. ಸಂಸದ ಸಂಗಣ್ಣ ಕರಡಿ ಸಹೋದರನಿಗೆ ಸೇರಿದ 12 ಎಕರೆ ಪಪ್ಪಾಯಿ ತೋಟ ಸಂಪೂರ್ಣ ಹಾನಿ ಆಗಿದೆ. ಇದನ್ನೂ ಓದಿ: ಧ್ವನಿವರ್ಧಕ ಬಳಕೆಗೆ ನಿಯಮ ಜಾರಿ – ಮಾರ್ಗಸೂಚಿಯಲ್ಲಿ ಏನಿದೆ?
Advertisement
ಕೋಲಾರದಲ್ಲೂ ಮಳೆ ಆಗಿದ್ದು, ಶ್ರೀನಿವಾಸಪುರ ತಾಲೂಕಿನ ಕಂಬಾಲಪಲ್ಲಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಸುವಿನ ಕೊಟ್ಟಿಗೆಗಗಳಿಗೆ ಹಾನಿ ಆಗಿದೆ. ಇತ್ತ ಚಿತ್ರದುರ್ಗದಲ್ಲಿ ಮಳೆಯಿಂದಾಗಿ ಹಾನಿ ಉಂಟಾಗಿದ್ದು ಸೂಕ್ತ ಪರಿಹಾರಕ್ಕಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬಳಿ ರೈತ ಮಹಿಳೆಯೊಬ್ಬರು ಅಂಗಲಾಚಿದ್ರು. ಮಳೆ ಗಾಳಿಗೆ ಏನು ಮಾಡಲು ಸಾಧ್ಯ, ಅತ್ತರೆ ಸಮಸ್ಯೆ ಪರಿಹಾರ ಆಗಲ್ಲ ಎಂದು ಶಾಸಕಿ ಸಮಾಧಾನ ಪಡಿಸಿದ್ರು. ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ – ಸುಪ್ರೀಂ ಕೋರ್ಟ್ ಆದೇಶ ಅಧ್ಯಯನಕ್ಕೆ ಸಿಎಂ ಸೂಚನೆ