ಬೆಂಗಳೂರು: ಮೇ ತಿಂಗಳಿನಲ್ಲಿ ನಿಗಿ, ನಿಗಿ ಕೆಂಡದಂತೆ ಸೂರ್ಯನ ಬಿಸಿಲು ಇರುವುದು ಕಾಮನ್. ಆದರೆ ಈ ಬಾರಿ ಅಸಾನಿ ಚಂಡಮಾರುತದ ಪರಿಣಾಮ ವರುಣನ ಆರ್ಭಟ ತಂಪು ಗಾಳಿ, ಚುಮು, ಚುಮು ಚಳಿಯಿಂದಾಗಿ ಬೆಂಗಳೂರಿನ ವಾತಾವರಣ ಕಳೆದ ಮೂರು ದಿನದಿಂದ ಊಟಿಯನ್ನು ಮೀರಿಸುತ್ತಿದೆ.
Advertisement
ಬೆಂಗಳೂರಿನ ಈ ವಾತಾವರಣ ದಾಖಲೆಯನ್ನು ಸೃಷ್ಟಿಸಿದೆ. ಅಸಾನಿ ಚಂಡಮಾರುತ ಬೆಂಗಳೂರಿನಲ್ಲಿ 54 ವರ್ಷದ ಹಿಂದಿನ ದಾಖಲೆ ರಿಪೀಟ್ ಮಾಡಿದೆ. 54 ವರ್ಷದ ಬಳಿಕ ಗುರುವಾರ ಬೆಂಗಳೂರಿನ ವೆದರ್ ಸೆಕೆಂಡ್ ಕೂಲೆಸ್ಟ್ ಡೇ ದಾಖಲೆ ಸೃಷ್ಟಿಯಾಗಿದೆ. ಇದನ್ನೂ ಓದಿ: ದೇಶದಲ್ಲಿ ಬಿಜೆಪಿ ತಾಲಿಬಾನ್ ವ್ಯವಸ್ಥೆ ರಚಿಸಲು ಬಯಸುತ್ತಿದೆ: ಶೀವಸೇನೆ
Advertisement
Advertisement
1972ರಲ್ಲಿ ಮೇ 14 ರಂದು 22.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಆದರೆ ಗುರುವಾರ ಬೆಂಗಳೂರಿನಲ್ಲಿ 23.00 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಲ್ಲದೇ ಇದು ಎರಡನೇ ಅತ್ಯಂತ ಕೂಲೆಸ್ಟ್ ಡೇ ಅಂತ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಬೇಲ್‌ನಲ್ಲಿರುವ ಶಾಸಕರ ಪುತ್ರ ನನ್ನ ಪ್ರಾಮಾಣಿಕತೆ ಪ್ರಶ್ನಿಸುತ್ತಿದ್ದಾರೆ: ನಲಪಾಡ್‌ಗೆ ರಮ್ಯಾ ತಿರುಗೇಟು