ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯ (Narendra Modi) ಮಾಜಿ ಸ್ನೇಹಿತ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯು ಇಂದು ತಿರುಗೇಟು ನೀಡಿದ್ದಾರೆ.
ಹೈದರಾಬಾದ್‍ನಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಜೀವನದಲ್ಲಿ ಇಬ್ಬರು ಪ್ರೀತಿಪಾತ್ರರಿದ್ದಾರೆ. ಅದರಲ್ಲಿ ಒಂದು ಇಟಲಿ, ಎರಡನೆಯದ್ದು ನರೇಂದ್ರ ಮೋದಿ. ಇಟಲಿ ಯಾಕೆಂದರೆ ಅವರ ತಾಯಿ ಅಲ್ಲಿಂದ ಬಂದವರಾಗಿದ್ದಾರೆ. ಅಧಿಕಾರವನ್ನು ನೀಡುವುದರಿಂದ ಮೋದಿ ಎರಡನೇ ಪ್ರೀತಿ ಪಾತ್ರರಾಗಿದ್ದಾರೆ ಎಂದು ಓವೈಸಿ (Asaduddin Owaisi) ತಿಳಿಸಿದ್ದಾರೆ.
Advertisement
Advertisement
2019 ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ (Amethi Constituency) ಇರಾನಿ ವಿರುದ್ಧದ ರಾಹುಲ್ ಸೋಲನ್ನು ಇದೇ ವೇಳೆ ಓವೈಸಿ ಕೆಣಕಿದರು. ಕಾಂಗ್ರೆಸ್ ನಾಯಕ ಕೇರಳದ ವಯನಾಡ್ ನಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ – ನೆನೆಪಿದೆಯಾ ಆ ಕರಾಳ ದಿನಗಳು..?
Advertisement
Advertisement
ರಾಹುಲ್ ಗಾಂಧಿಯವರೇ ನಾನು ನಿಮಗೆ ಮನವಿ ಮಾಡುತ್ತೇನೆ, ದಯವಿಟ್ಟು ಇನ್ನು ಮುಂದೆ ಏಕಾಂಗಿ ಇರಬೇಡಿ. ನಿಮಗೆ ಈಗ 50 ವರ್ಷ ವಯಸ್ಸಾಗಿದೆ. ಕಾಂಗ್ರೆಸ್ ಸಂಸದರಿಗೆ ಮನೆಯಲ್ಲಿ ಪಾಲುದಾರರಿಲ್ಲದ ಕಾರಣ, ಅವರು ಯಾವಾಗಲೂ ಸ್ನೇಹಿತರ ಬಗ್ಗೆ ಯೋಚಿಸುತ್ತಾರೆ ಮತ್ತು ಮಾತನಾಡುತ್ತಾರೆ. ಇನ್ನು ಮುಂದೆ ಇಂತಹ ಹುಚ್ಚುತನದಲ್ಲಿ ತೊಡಗಬೇಡಿ. ಯಾಕೆಂದರೆ ಅದಕ್ಕೆ ಇದು ಸರಿಯಾದ ವಯಸ್ಸಲ್ಲಿ ಎಂದು ರಾಹುಲ್ ವಯಸ್ಸಿನ ಬಗ್ಗೆ ಕೆದಕಿದರು.
ತೆಲಂಗಾಣದಲ್ಲಿ (Telangana) ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್) ಸರ್ಕಾರವನ್ನು ಭ್ರಷ್ಟ. ಬಿಜೆಪಿ ಮತ್ತು ಎಐಎಂಐಎಂ (AIMIM) ಎರಡೂ ಒಂದೇ ಆಗಿವೆ. ನರೇಂದ್ರ ಮೋದಿಯವರಿಗೆ ಇಬ್ಬರು ಗೆಳೆಯರಿದ್ದಾರೆ. ಒಂದು ಓವೈಸಿ ಇನ್ನೊಂದು ಬಿಆರ್ ಎಸ್ ನಾಯಕ, ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ (KC Chandrashekhar Rao). ಕೆಸಿಆರ್ ಅವರು ಮೋದಿ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ, ಇತ್ತ ಮೋದಿಯವರು ಕೆಸಿಆರ್ ಮುಖ್ಯಮಂತ್ರಿಯಾಗಬೇಕು ಎಂಬುದಾಗಿ ಬಯಸುತ್ತಾರೆ ಎಂದು ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ಪಕ್ಷವು ಮೊದಲು ತೆಲಂಗಾಣದಲ್ಲಿ ಬಿಆರ್ ಎಸ್ ಮತ್ತು ನಂತರ ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸುವ ಗುರಿ ಹೊಂದಿದೆ. ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಹಳೆಯ ಪಕ್ಷವು ಪ್ರಚಂಡ ಬಹುಮತದೊಂದಿಗೆ ಗೆಲ್ಲಲಿದೆ ಎಂದು ಅವರು ಹೇಳಿದ್ದರು.
ತೆಲಂಗಾಣ ತನ್ನ 119 ಸದಸ್ಯರ ರಾಜ್ಯ ವಿಧಾನಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನವೆಂಬರ್ 30 ರಂದು ಮತದಾನ ನಡೆಯಲಿದೆ. ಛತ್ತೀಸ್‍ಗಢ, ಮಿಜೋರಾಂ, ಮಧ್ಯಪ್ರದೇಶ ಮತ್ತು ರಾಜಸ್ಥಾನದೊಂದಿಗೆ ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.