Connect with us

Latest

ನಿಜಾಮರಂತೆ ಓವೈಸಿ ಕೂಡ ತೆಲಂಗಾಣದಿಂದ ಪಲಾಯನ ಮಾಡಬೇಕಾಗುತ್ತದೆ – ಯೋಗಿ ಆದಿತ್ಯನಾಥ್

Published

on

ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖಂಡ ನಾಯಕ ಅಸಾದುದ್ದೀನ್ ಓವೈಸಿ, ನಿಜಾಮರಂತೆ ತೆಲಂಗಾಣದಿಂದ ಪಲಾಯನ ಮಾಡಬೇಕಾಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ವಿಕರಾಬಾದ್ ಜಿಲ್ಲೆಯ ತಂದೂರ್ ನಗರದಲ್ಲಿ ಏರ್ಪಡಿಸಲಾಗಿದ್ದ ಯಾತ್ರೆಯಲ್ಲಿ ಭಾಗವಹಿಸಿ ಯೋಗಿ ಆದಿತ್ಯನಾಥ್ ಮಾತನಾಡಿದರು. ಬಳಿಕ ಸಂಗಾರೆಡ್ಡಿ ಜಿಲ್ಲೆ ಸೇರಿದಂತೆ ಹಲವು ಯಾತ್ರೆಯಲ್ಲಿ ಭಾಗವಹಿಸಿದ್ದರು.

ಉಗ್ರಗಾಮಿ ಹಾಗೂ ಐಸಿಸ್ ಸಂಘಟನೆಗಳೊಂದಿಗೆ ಸಂಬಂಧಗಳನ್ನು ಹೊಂದಿರುವ ಸಂಘಟನೆಗಳ ಕೈಯಲ್ಲಿ ದೇಶದ ರಕ್ಷಣೆ ಸಾಧ್ಯವೇ? ದೇಶದ ಕುರಿತು ಬದ್ಧತೆ ಹೊಂದಿರುವ ಯುವಕರ ಸಂಘಟನೆಯಿಂದ ದೇಶ ನಡೆಯಬೇಕೇ ಅಥವಾ ಕಾಂಗ್ರೆಸ್ ನಂತಹ ಪಕ್ಷ ನಾಯಕರ ಮುಂದಾಳತ್ವದಲ್ಲಿ ದೇಶ ನಡೆಯಬೇಕೇ ಎನ್ನುವುದನ್ನು ನೀವೇ ನಿರ್ಧಾರ ಮಾಡಿ ಎಂದರು. ಅಲ್ಲದೇ ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಪಕ್ಷಗಳು ನಕ್ಸಲ್ ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಸಿಎಂ ಯೋಗಿ ಆದಿತ್ಯನಾಥ್ ಇಂದಿನಿಂದ ತೆಲಂಗಾಣ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಕೆಲ ದಿನಗಳ ಹಿಂದೆ ವಿಕರಾಬಾದ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಓವೈಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಲ್ಲಾ ಸೋಲಿಸುತ್ತಾನೆ ಎಂದು ವಾಗ್ದಾಳಿ ನಡೆಸಿದ್ದರು. ಸದ್ಯ ಓವೈಸಿ ಹೇಳಿಕೆಗೆ ಸಿಎಂ ಯೋಗಿ ಆದಿತ್ಯನಾಥ್ ಟಾಂಗ್ ನೀಡಿದ್ದಾರೆ. ಅಂದಹಾಗೇ ಕಳೆದ 2014 ತೆಲಂಗಾಣ ಚುನಾವಣೆಯಲ್ಲಿ ಬಿಜೆಪಿ 119 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಇದನ್ನು ಓದಿ : ಶಾ, ಮೋದಿಗೆ ಬೀಫ್ ಬಿರಿಯಾನಿ ತಿನ್ನಿಸ್ತಾರಂತೆ ಓವೈಸಿ..!- ತೆಲಂಗಾಣ ಚುನಾವಣೆಯಲ್ಲಿ ಬೀಫ್ ಪಾಲಿಟಿಕ್ಸ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *