ಬೆಳಗಾವಿ: ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ. ಆದ್ದರಿಂದ ಕರ್ನಾಟಕದಲ್ಲಿ ಜೆಡಿಎಸ್ ಬೆಂಬಲಿಸಿದ್ದೇನೆ. ನಾನು ಮುಸ್ಲಿಂ ಮತಗಳನ್ನು ಒಡೆಯಲು ಬಂದಿಲ್ಲವೆಂದು ಎಐಎಂಐಎಂ ಸ್ಥಾಪಕ ಅಸಾದುದ್ದೀನ್ ಓವೈಸಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಪರ ಪ್ರಚಾರಕ್ಕೆ ನಗರಕ್ಕೆ ಬಂದಿದ್ದ ವೇಳೆ ಮಾತನಾಡಿದ ಅವರು, ಅನೇಕ ದಿನಗಳ ಹಿಂದೆಯೇ ನಾನು ಬೆಳಗಾವಿ ನಗರರಕ್ಕೆ ಬರಲು ಇಚ್ಛಿಸಿದ್ದೆ. ಆದ್ರೆ ಕರ್ನಾಟಕದ ತಾತ್ಕಾಲಿಕ ಸಿಎಂ ಸಿದ್ದರಾಮಯ್ಯ ಅವರು ಅವಕಾಶ ನೀಡಲಿಲ್ಲ. ರಾಜ್ಯದಲ್ಲಿ ಅನೇಕ ಬಾರಿ ಸಭೆ ಮತ್ತು ಸಮಾವೇಶಗಳನ್ನು ನಡೆಸಲು ಅವಕಾಶ ಕೇಳಿದ್ದೆ, ಆದ್ರೆ ಪ್ರತಿಬಾರಿಯೂ ಸರ್ಕಾರ ಪೊಲೀಸರ ಮೇಲೆ ಒತ್ತಡ ತಂದು ನಿಲ್ಲಿಸುವ ಪ್ರಯತ್ನ ಮಾಡಿತ್ತು ಅಂತಾ ಆರೋಪಿಸಿದ್ರು.
Advertisement
Advertisement
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಐದು ನಿಮಿಷ ಮಾತನಾಡಲು ಬರಲ್ಲ. ಐದು ನಿಮಿಷ ನನ್ನ ಜೊತೆ ಚರ್ಚೆಗೆ ಬನ್ನಿ ಎಂದು ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಬಹಿರಂಗ ಸವಾಲು ಹಾಕಿದ್ರು. ಕಾಂಗ್ರೆಸ್‍ನವರು ಮುಸ್ಲಿಂ ನಾಯಕರನ್ನು ಬೆಳೆಸಲು ಬಿಡುತ್ತಿಲ್ಲ. ದೇಶದಲ್ಲಿ ಉತ್ತರ ಪ್ರದೇಶ ನಂತರ ಅತಿ ಹೆಚ್ಚು ಅಪರಾಧ ಪ್ರಕರಣಗಳು ಕರ್ನಾಟಕದಲ್ಲಿ ನಡೆದಿವೆ. ಇದೇನಾ ಕಾಂಗ್ರೆಸ್ ಜಾತ್ಯಾತೀತ ತತ್ವ ಎಂದು ಪ್ರಶ್ನಿಸಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯ ಸೋಲು ಖಚಿತ ಅಂತಾ ಭವಿಷ್ಯ ನುಡಿದ್ರು.