ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮೂಲಕ ಸರ್ಕಾರ ಮುಸ್ಲಿಮರ ಆಸ್ತಿ ಕಬಳಿಕೆ ಮಾಡುವ ಹುನ್ನಾರ ಮಾಡಿದೆ, ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಮರಿಂದ ಸ್ಮಶಾನಗಳು, ಮಸೀದಿಗಳು ಮತ್ತು ದರ್ಗಾಗಳನ್ನು ಕಸಿದುಕೊಳ್ಳುವ ನಿಬಂಧನೆಗಳನ್ನು ಹೊಂದಿದೆ ಎಂದು ಎಐಎಮ್‌ಐಎಮ್ (AIMIM) ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಆರೋಪಿಸಿದ್ದಾರೆ.
ಮಸೂದೆ ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಮಸೂದೆ ವಕ್ಫ್ ಆಸ್ತಿಯನ್ನು ಉಳಿಸುವುದಕ್ಕಾಗಿ ಅಲ್ಲ, ಅತಿಕ್ರಮಣಕಾರರನ್ನು ತೆಗೆದುಹಾಕುವುದಕ್ಕಾಗಿ ಅಲ್ಲ, ಈ ಮಸೂದೆ ವಕ್ಫ್ ಆಸ್ತಿಯನ್ನು ಕೊನೆಗೊಳಿಸುವುದಕ್ಕಾಗಿ. ಮುಸ್ಲಿಮರಿಂದ ಸ್ಮಶಾನಗಳು, ಖಾಂಕಾ, ದರ್ಗಾಗಳನ್ನು ಕಸಿದುಕೊಳ್ಳುವುದಕ್ಕಾಗಿ. ಅವರ ಉದ್ದೇಶಗಳು ಕೆಟ್ಟವು ಮತ್ತು ಅವರು ದೇಶದಲ್ಲಿ ದೂರವನ್ನು ಹೆಚ್ಚಿಸಲು ಬಯಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ‘ಅಪ್ಪು’ ಸಿನಿಮಾ ನೋಡೋಕೆ ನನಗೆ ಧೈರ್ಯ ಇಲ್ಲ: ಶಿವಣ್ಣ
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಕಾಯ್ದೆಯನ್ನು ಬೆಂಬಲಿಸಿದರೆ ಸಾರ್ವಜನಿಕರು ಅವರನ್ನು ಜೀವನಪರ್ಯಂತ ನೆನಪಿಸಿಕೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ನ್ಯಾಯಬೆಲೆ ಅಂಗಡಿಗಳಲ್ಲಿ ನೋ ಸ್ಟಾಕ್ ಬೋರ್ಡ್; ಸರಬರಾಜು ಸಮಸ್ಯೆ ಆಗಿದೆ, ಅಕ್ಕಿ ಕೊರತೆ ಇಲ್ಲ: ಮುನಿಯಪ್ಪ
ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತದಲ್ಲಿ ಸರ್ಕಾರ ವಕ್ಫ್ ಮಸೂದೆಯನ್ನು ಪರಿಚಯಿಸುವ ನಿರೀಕ್ಷೆಯಿದೆ. ಬಿಜೆಪಿ ಸಂಸದೆ ಜಗದಾಂಬಿಕಾ ಪಾಲ್ ನೇತೃತ್ವದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ರಚಿಸಲಾದ ಜಂಟಿ ಸಂಸದೀಯ ಸಮಿತಿಯಲ್ಲಿ ಓವೈಸಿ ಸದಸ್ಯರೂ ಆಗಿದ್ದರು. ಈ ಮಸೂದೆಯನ್ನು ವಾಪಸ್ ಪಡೆಯಲು ವ್ಯಾಪಕ ಒತ್ತಡ ಕೇಳಿ ಬರುತ್ತಿದೆ. ಇದನ್ನೂ ಓದಿ: ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರೋ ಬೋಧಕ ಹುದ್ದೆ ಹಂತ ಹಂತವಾಗಿ ಭರ್ತಿ: ಡಾ.ಸುಧಾಕರ್