ವಿಜಯಪುರ: ಮುಸ್ಲಿಮರ ಗಡ್ಡ, ಊಟ, ಟೋಪಿಗೆ ತೊಂದರೆ ಇದೆ ಎಂದು ಬಿಜೆಪಿ ಆಡಳಿತದ ವಿರುದ್ಧ ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಬ್ ಕಾ ವಿಕಾಸ್, ಸಬ್ ಕಾ ಸಾಥ್ ಬರೀ ಬಿಜೆಪಿ ಮಾತಿನಲ್ಲೇ ಇದೆ. ಬಿಜೆಪಿ ಮುಸ್ಲಿಮರ ವಿರುದ್ಧ ಇದೆ. ಬಿಜೆಪಿ (BJP) ಹಲಾಲ್ ಕಟ್ ಮಾಡಿ ತಮ್ಮ ಕಮಿಷನ್ ಮಾಡಿಕೊಳ್ಳುತ್ತಿದೆ. ಹಲಾಲ್ (Halal Cut) ವಿಚಾರದಲ್ಲಿ ಬಿಜೆಪಿ ಕಮಿಷನ್ ಮಾಡುತ್ತಿದೆ. ಬಿಜೆಪಿ ಕಮಿಷನ್ ಬಗ್ಗೆ ವೀಡಿಯೋಗಳಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಮಗೆ ಅಧಿಕಾರ ಬೇಕಿಲ್ಲ ಅಂದ್ರು ರಾಹುಲ್- ಶಾಕ್ ಕೊಟ್ಟ ಡಿಕೆಶಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ವಿರುದ್ಧ ಕಿಡಿಕಾರಿದ ಓವೈಸಿ, ನಾವು ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಆದರೆ ಶಾಸಕ ಯತ್ನಾಳ್ ಪದೇಪದೆ ಪಾಕಿಸ್ತಾನದ ಹೆಸರು ಉಲ್ಲೇಖ ಮಾಡುತ್ತಾರೆ. ಪಾಕಿಸ್ತಾನ ಮೇಲೆ ಅವರಿಗೆ ಪ್ರೀತಿ ಇದೆ. ಪಾಕಿಸ್ತಾನ ಮೇಲೆ ಪ್ರೀತಿ ಯಾಕೆ ಇದೆ ಎಂಬುದು ಅವರಿಗೆ ಗೊತ್ತು, ನನಗೆ ಗೊತ್ತಿಲ್ಲ. ಪ್ರಧಾನಿ ಮೋದಿ ಯತ್ನಾಳ್‌ಗೆ ಹೇಳಿಕೊಟ್ಟಿರಬಹುದು. ಪದೇಪದೆ ಪಾಕಿಸ್ತಾನ ಹೆಸರು ಹೇಳು ಎಂದು ಪ್ರಧಾನಿ ಹೇಳಿದ್ದಕ್ಕೆ ಯತ್ನಾಳ್ ಹೇಳ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಹಿಜಬ್ ಕುರಿತು ಸುಪ್ರೀಂ ಕೋರ್ಟ್ (Supreme Court) ತೀರ್ಪು ವಿಚಾರವಾಗಿ ಮಾತನಾಡಿ, ಹಿಜಬ್ (Hijab) ಪರ ತೀರ್ಪು ಬಂದಿದ್ದು ಸಂತಸ ತಂದಿದೆ. ತೀರ್ಪಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಹಿಜಬ್ ಪರ ತೀರ್ಪು ಬಂದಿದ್ದು ನಮ್ಗೆ ದೊಡ್ಡ ತೀರ್ಪು ಆಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆಲವು ಮುಸ್ಲಿಮರು ಶಿವಮೊಗ್ಗವನ್ನು ಹಾಳು ಮಾಡ್ತಿದ್ದಾರೆ: ಕೆ.ಎಸ್ ಈಶ್ವರಪ್ಪ