ನವದೆಹಲಿ: ಪಾಕಿಸ್ತಾನದಿಂದ (Pakistan) ಬಂದ ಭಯೋತ್ಪಾದಕರು ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಕಿಡಿಕಾರಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ (Jammu Kashmir) ಆರ್ಟಿಕಲ್ 370 ರದ್ದು ಮಾಡಿ ಇಲ್ಲಿಗೆ ನಾಲ್ಕು ವರ್ಷಗಳಾಗಿವೆ. ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಓವೈಸಿ, ಪಾಕಿಸ್ತಾನದಿಂದ (Pakistan) ಬಂದ ಭಯೋತ್ಪಾದಕರು (Terrorists) ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಅಂತಹ ದೇಶದ ಜೊತೆ ನೀವು ವಿಶ್ವಕಪ್ ಪಂದ್ಯ ಆಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ – ಮೂವರು ಯೋಧರು ಹುತಾತ್ಮ
- Advertisement
ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆ ಕುರಿತು ಮಾತನಾಡಿ, ಎಎಸ್‌ಐ ವರದಿ ಬಂದಾಗ ಬಿಜೆಪಿ-ಆರ್‌ಎಸ್‌ಎಸ್ ಏನು ಮಾತನಾಡುತ್ತೋ ಎಂಬ ಆತಂಕ ನಮಗಿದೆ. ಅದು ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಡಿಸೆಂಬರ್ 23 ಅಥವಾ ಡಿಸೆಂಬರ್ 6 (ಬಾಬರಿ ಮಸೀದಿ ಧ್ವಂಸ) ರಂತಹ ಘಟನೆಯ ಬಗ್ಗೆ ನನಗೆ ಆತಂಕವಿದೆ. ಬಾಬರಿ ಮಸೀದಿಯಂತಹ ಸಮಸ್ಯೆಗಳು ಉದ್ಭವಿಸುವುದನ್ನು ನಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ.
- Advertisement
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಎಎಸ್‌ಐ ಸಮೀಕ್ಷೆ ನಡೆಸಲು ಅನುಮತಿ ನೀಡಿ ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ. ಅದರಂತೆ ಎಎಸ್‌ಐ ಅಧಿಕಾರಿಗಳು ನಿನ್ನೆಯಿಂದ ಸರ್ವೆ ಕಾರ್ಯವನ್ನು ಆರಂಭಿಸಿದ್ದಾರೆ. ಇಂದು ಕೂಡ ಬಿಗಿ ಭದ್ರತೆಯೊಂದಿಗೆ ಸಮೀಕ್ಷೆ ನಡೆಸಲಾಯಿತು. ಇದನ್ನೂ ಓದಿ: ಹಿಜಬ್ ಹಾಕದೇ ಶಾಲೆಗೆ ಬಂದ ಬಾಲಕಿಯರನ್ನು ತಡೆದ 10 ನೇ ತರಗತಿ ಮುಸ್ಲಿಂ ವಿದ್ಯಾರ್ಥಿ – ಗುಂಪಿನಿಂದ ಹಲ್ಲೆ
Web Stories