– ಜೈ ಭೀಮ್, ತಕ್ಬೀರ್ ಅಲ್ಲಾಹು ಅಕ್ಬರ್ ಎಂದ ಓವೈಸಿ
– ಅಧಿವೇಶನದಲ್ಲಿ ಸದ್ದು ಮಾಡಿದ ಘೋಷಣೆಗಳು
ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಅಧಿವೇಶದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಎದ್ದು ಬರುತ್ತಿದ್ದಂತೆ ಕೆಲ ಸಂಸದರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ ಪ್ರಸಂಗ ಇಂದು ನಡೆದಿದೆ.
ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಆಯ್ಕೆಯಾಗಿರುವ ಅಸಾದುದ್ದೀನ್ ಓವೈಸಿ ಅವರು ಇಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಈ ವೇಳೆ ಅಧಿವೇಶನಲ್ಲಿ ಜೈ ಶ್ರೀರಾಮ್, ವಂದೇ ಮಾತರಂ ಘೋಷಣೆ ಭಾರೀ ಸದ್ದು ಮಾಡಿತು. ಇದರಿಂದಾಗಿ ಸ್ವಲ್ಪ ವಿಚಲಿತಗೊಂಡ ಓವೈಸಿ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ‘ಜೈ ಭೀಮ್’, ಜೈ ಮೀಮ್, ತಕ್ಬೀರ್ ಅಲ್ಲಾಹು ಅಕ್ಬರ್, ಜೈ ಹಿಂದ್ ಎಂದು ಕೂಗಿದರು. ಇದನ್ನೂ ಓದಿ: ಜೈ ಹಿಂದ್, ಜೈ ಬಂಗಾಳ್ – ದೀದಿ ಪಡೆಯಿಂದ ಮೋದಿಗೆ 10 ಸಾವಿರ ಅಂಚೆಪತ್ರ
Advertisement
Asaduddin Owaisi, AIMIM on 'Jai Sri Ram' & 'Vande Mataram' slogans being raised in Lok Sabha while he was taking oath as MP: It is good that they remember such things when they see me, I hope they will also remember the constitution and deaths of children in Muzaffarpur. pic.twitter.com/THJN8n8out
— ANI (@ANI) June 18, 2019
Advertisement
ಓವೈಸಿ ಅವರ ಪ್ರಮಾಣ ವಚನದ ಬಳಿಕವೂ ಸಂಸದರ ಘೋಷಣೆ ಜೋರಾಗಿಯೇ ಇತ್ತು. ಹೀಗಾಗಿ ಓವೈಸಿ ಸಹಿ ಮಾಡುವುದನ್ನೇ ಮರೆತಿದ್ದರು. ತಕ್ಷಣವೇ ಅಧಿಕಾರಿಗಳು ಅವರನ್ನು ಕರೆದು ಸಹಿ ಪಡೆದರು. ಇದನ್ನೂ ಓದಿ: ಜೈ ಶ್ರೀರಾಮ್ ಹೇಳೋ ಬಿಜೆಪಿ ಬಾಬುಗಳೇ ಒಂದಾದ್ರೂ ರಾಮಮಂದಿರ ಕಟ್ಟಿದ್ರಾ?: ಮಮತಾ ಬ್ಯಾನರ್ಜಿ
Advertisement
ಈ ಕುರಿತು ಪ್ರತಿಕ್ರಿಯೆ ನೀಡಿದ ಓವೈಸಿ ಅವರು, ನನ್ನನ್ನು ನೋಡಿದಾಗ ಅವರು ಇಂತಹ ವಿಷಯಗಳನ್ನು ನೆನಪಿಸಿಕೊಳ್ಳುತ್ತರುವುದು ಇದು ಒಳ್ಳೆಯದು. ಅಷ್ಟೇ ಅಲ್ಲದೆ ನನ್ನನ್ನು ನೋಡಿದಾಗ ಅವರಿಗೆ ಸಂವಿಧಾನ ಹಾಗೂ ಮುಜಾಫರ್ ಪುರ್ ನಲ್ಲಿ ಮಕ್ಕಳ ಸಾವಿನ ಘಟನೆ ಕೂಡ ನನೆಪಾಗುತ್ತದೆ ಎಂದು ಹೇಳಿದರು.
Advertisement
ಜೈ ಶ್ರೀರಾಮ್ ಘೋಷಣೆ ಕೆಲ ದಿನಗಳ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಕೂಡ ವಿಚಲಿತಗೊಳಿಸಿತ್ತು. ಬಳಿಕ ಅದು ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಅಂಚೆ ಪತ್ರ ಕ್ರಾಂತಿಗೆ ಕಾರಣವಾಗಿತ್ತು.
Hyderabad AIMIM MP Barrister @asadowaisi takes oath in Lok Sabha. pic.twitter.com/objAfetEu6
— AIMIM (@aimim_national) June 18, 2019