ಮೋದಿಗೆ ನಾಟಕ, ಖಿನ್ನತೆ ಮತ್ತು ದೌರ್ಜನ್ಯ ಎನ್ನುವ ಮೂವರು ಸ್ನೇಹಿತರಿದ್ದಾರೆ: ಓವೈಸಿ

Public TV
1 Min Read
Asaduddin Owaisi 1

ಲಕ್ನೋ: ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ನಾಟಕ, ಖಿನ್ನತೆ ಮತ್ತು ದೌರ್ಜನ್ಯ ಎಂಬ ಮೂವರು ಸ್ನೇಹಿತರಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಭಾಷಣವೊಂದರಲ್ಲಿ ಹೇಳಿರುವ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.

NARENDRA MODI 1 5

ಉತ್ತರ ಪ್ರದೇಶ ಸಹರಾನ್ ಪುರದಲ್ಲಿ ಸಾರ್ವಜನಿಕ ಸಭೇಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ಮೋದಿಗೆ ನಾಟಕ, ಖಿನ್ನತೆ ಮತ್ತು ದೌರ್ಜನ್ಯ ಎಂಬ ಮೂವರು ಸ್ನೇಹಿತರಿದ್ದಾರೆ. ಅಷ್ಟೇ ಅಲ್ಲದೇ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಂದ್ರೆ ಅಪರಾಧ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

Asaduddin Owaisi

ಇದೇ ವೇಳೆ ಹರಿದ್ವಾದರ ಧರ್ಮ ಸಂಸತ್‍ನಲ್ಲಿನ ದ್ವೇಷದ ಭಾಷಣದ ವಿಚಾರವಾಗಿ ಪ್ರಸ್ತಾಪ ಮಾಡಿದ್ದು, ದೇಶದಲ್ಲಿ ಬಿಜೆಪಿಯವರು ದ್ವೇಷವನ್ನು ಹರಡುತ್ತಿದ್ದಾರೆ ಇವರುಗಳಿಂದ ಭಾರತದ ಸಂವಿಧಾನವನ್ನ ಉಳಿಸುವ ಅಗತ್ಯವಿದೆ ಎಂದು ವಿವಾದಾತ್ಮಕವಾದ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:  ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಮೋದಿ

Share This Article
Leave a Comment

Leave a Reply

Your email address will not be published. Required fields are marked *