ನವದೆಹಲಿ: ಝಡ್ ಶ್ರೇಣಿಯ ಭದ್ರತೆಗೆ ಒಪ್ಪಿಕೊಳ್ಳಿ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ದಾಳಿಗೊಳಗಾಗಿದ್ದ ಅಸಾದುದದ್ಧಿನ್ ಓವೈಸಿ ಅವರಿಗೆ ಸರ್ಕಾರ ಝಡ್ ಶ್ರೇಣಿ ಭದ್ರತೆ ಒಪ್ಪಿಕೊಳ್ಳುವಂತೆ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ಈ ಕುರಿತಾಗಿ ಮಾತನಾಡಿದ, ಒವೈಸಿ ಅವರು ಮಾರಕಾಸ್ತ್ರಗಳನ್ನು ಹೊಂದಿರುವ ಜನರು ನನ್ನ ಸುತ್ತಲೂ ಇರಬೇಕೆಂದು ನಾನು ಬಯಸುವುದಿಲ್ಲ. ನಾನು ಸ್ವತಂತ್ರ ಹಕ್ಕಿ. ಮುಕ್ತವಾಗಿ ಜೀವಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶವನ್ನು ಒಡೆದು ಆಳುವ ಕಾಂಗ್ರೆಸ್ ತುಕ್ಡೆ ತುಕ್ಡೆ ಗ್ಯಾಂಗ್ ಲೀಡರ್: ನರೇಂದ್ರ ಮೋದಿ
Advertisement
ರಾಜ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ ಅವರು, ಕಾರಿನ ಮೇಲೆ ದಾಳಿ ನಡೆಸಿದ ಬಳಿಕ ಸರ್ಕಾರ ನೀಡಿರುವ ಝಡ್ ಕೆಟಗರಿ ಭದ್ರತೆಯನ್ನು ಸ್ವೀಕರಿಸಿ. ಓವೈಸಿ ಇನ್ನೂ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಸರ್ಕಾರದ ಮೌಲ್ಯಮಾಪನವು ಕಂಡುಹಿಡಿದಿದೆ. ಆದರೆ ಹೈದರಾಬಾದ್ ಸಂಸದರು ಸಿಆರ್‍ಪಿಎಫ್ ರಕ್ಷಣೆ ಪಡೆಯಲು ನಿರಾಕರಿಸಿದ್ದಾರೆ. ಒವೈಸಿ ಅವರು ನಮಗೆ ಕಳುಹಿಸಿದ ಮೌಖಿಕ ಮಾಹಿತಿಯ ಪ್ರಕಾರ, ಅವರು ಭದ್ರತೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ತಕ್ಷಣವೇ ಭದ್ರತೆಯನ್ನು ತೆಗೆದುಕೊಳ್ಳುವಂತೆ ಮತ್ತು ನಮ್ಮ ಮತ್ತು ಅವರ ಸುರಕ್ಷತೆಯ ಬಗ್ಗೆ ತಿಳಿಸುವಂತೆ ನಾನು ಈ ಸದನದ ಮೂಲಕ ಓವೈಸಿ ಅವರನ್ನು ವಿನಂತಿಸುತ್ತೇನೆ ಎಂದು ಶಾ ಮೇಲ್ಮನೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಖಡ್ಗ, ಭಯ, ದಬ್ಬಾಳಿಕೆಯಿಂದ ತನ್ವೀರ್ ಸೇಠ್ ಆಗಿದ್ದಾರೆ: ಪ್ರತಾಪ್ ಸಿಂಹ
Advertisement
Advertisement
ಫೆಬ್ರವರಿ 3, 2022 ರಂದು ಉತ್ತರ ಪ್ರದೇಶದಲ್ಲಿ ಓವೈಸಿ ಅವರ ಕಾರಿನ ಮೇಲೆ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ ಓವೈಸಿ ಅವರಿಗೆ ಕೇಂದ್ರ ಸರ್ಕಾರ ಭದ್ರತೆಯನ್ನು ನೀಡುವುದಾಗಿ ಹೇಳಿತ್ತು. ಆದರೆ ಭದ್ರತೆಯನ್ನು ಓವೈಸಿ ನಿರಾಕರಿಸಿದ್ದಾರೆ.