ನವದೆಹಲಿ: ಶಹಜಹಾನ್ ತಾಜ್ ಮಹಲ್ ನಿರ್ಮಿಸದಿದ್ದರೆ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 40 ರೂ. ಆಗುತ್ತಿತ್ತು ಎಂದು ಸಂಸದ ಅಸಾದುದ್ದೀನ್ ಓವೈಸಿ ವ್ಯಂಗ್ಯವಾಡಿದರು.
ದೇಶದ ಎಲ್ಲಾ ಸಮಸ್ಯೆಗಳಿಗೆ ಮೊಘಲರು ಮತ್ತು ಮುಸ್ಲಿಮರನ್ನು ಕಾರಣವೆಂದು ಬಿಜೆಪಿ ದೂಷಿಸುತ್ತಿದೆ ಎಂದು ಆರೋಪಿಸಿ ಮಾತನಾಡಿದ ಅವರು, ದೇಶದಲ್ಲಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಜೊತೆಗೆ ಹಣದುಬ್ಬರವು ಹೆಚ್ಚುತ್ತಿದೆ. ಡೀಸೆಲ್ ದರ 102 ರೂ.ಗೆ ಮಾರಾಟವಾಗುತ್ತಿದೆ. ಇದಕ್ಕೆಲ್ಲಾ ನಿಜವಾದ ಹೊಣೆ ಪ್ರಧಾನಿ ಮೋದಿಯಲ್ಲ. ಬದಲಿಗೆ ಔರಂಗಜೇಬ್ ಆಗಿದ್ದಾನೆ ಎಂದು ಟೀಕಿಸಿದರು. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಡಿಕೆಶಿ ಕೆಂಪೇಗೌಡ ಉತ್ಸವ ಟಕ್ಕರ್
Advertisement
देश में महंगाई, बेरोज़गारी, और बढ़ती पेट्रोल-डीज़ल की कीमतों का ज़िम्मेदार @narendramodi नहीं, मुग़ल हैं???? – Barrister @asadowaisi https://t.co/KLDrUaOwMz
— AIMIM (@aimim_national) July 4, 2022
ಯುವಜನರು ನಿರುದ್ಯೋಗಿಗಳು ಆಗಲು ಅಕ್ಬರ್ ಕಾರಣವಾದರೆ, ಪೆಟ್ರೋಲ್ ಬೆಲೆ ಲೀಟರ್‌ಗೆ 115 ರೂ. ಏರಿಕೆ ಆಗಿರುವುದಕ್ಕೆ ತಾಜ್‍ಮಹಲ್ ಕಟ್ಟಿದ ಶಹಜಹಾನ್ ಕಾರಣ ಎಂದರು. ಶಹಜಹಾನ್ ತಾಜ್‍ಮಹಲ್ ಅನ್ನು ಕಟ್ಟದಿದ್ದರೆ ಇಂದು ಪೆಟ್ರೊಲ್ 40ಕ್ಕೆ ಮಾರಾಟವಾಗುತ್ತಿತ್ತು. ತಾಜ್ ಮಹಲ್ ಹಾಗೂ ಕೆಂಪುಕೊಟೆಯನ್ನು ಕಟ್ಟುವ ಮೂಲಕ ಅವರು ತಪ್ಪು ಮಾಡಿದ್ದಾರೆ. ಅದರ ಬದಲು ಆ ಹಣವನ್ನು ಉಳಿಸಿ 2014ರಲ್ಲಿ ಮೋದಿ ಅವರಿಗೆ ತಲುಪಿಸಬೇಕಾಗಿತ್ತು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಹವಾಮಾನ ವೈಪರೀತ್ಯ – ಅಮರನಾಥ ಯಾತ್ರಾ ತಾತ್ಕಾಲಿಕ ಸ್ಥಗಿತ