ನವದೆಹಲಿ: ನಾನು ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಭೇಟಿ ನೀಡಿದಾಗ ಭಯಭೀತನಾಗಿದ್ದೆ ಎಂದು ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ (Former Home Minister Sushilkumar Shinde) ತಮ್ಮ ಅನುಭವವನ್ನು ಬಚ್ಚಿಟ್ಟಿದ್ದಾರೆ.
ಮಂಗಳವಾರ ನಡೆದ ‘ರಾಜಕೀಯದಲ್ಲಿ ಐದು ದಶಕಗಳು’ (Five Decades in Politics) ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 2012ರಲ್ಲಿ ಮನಮೋಹನ್ ಸಿಂಗ್ (Manmohan Singh) ಅವರು ಪ್ರಧಾನಿಯಾಗಿದ್ದಾಗ ನಾನು ಗೃಹ ಸಚಿವನಾಗಿದ್ದೆ. ಆ ಸಮಯದಲ್ಲಿ ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸಂಗೀತ ನಿರ್ದೇಶಕ ಗುರುಕಿರಣ್, ಸಮಾಜ ಸೇವಕ ರಾಜಣ್ಣಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್
Advertisement
Advertisement
ನಾನು ಗೃಹ ಸಚಿವ ಸ್ಥಾನಕ್ಕೇರುವ ಮೊದಲು ಶಿಕ್ಷಣ ತಜ್ಞ ವಿಜಯಧರ್ ಎಂಬುವವರನ್ನು ಭೇಟಿಯಾಗಿದ್ದೆ. ನನಗೆ ಅವರು ಶ್ರೀನಗರದ ಲಾಲ್ ಚೌಕ್‌ಗೆ ಹೋಗಿ, ಅಲ್ಲಿನ ಜನರನ್ನು ಭೇಟಿ ಮಾಡಿ, ದಾಲ್ ಸರೋವರವನ್ನು ಸುತ್ತಾಡಿ ಬರುವಂತೆ ಸಲಹೆ ನೀಡಿದ್ದರು.ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಚುನಾಣೆಗೆ ಖರ್ಚು – ಸಂಸದ ಸ್ಥಾನದಿಂದ ತುಕಾರಾಂ ವಜಾಕ್ಕೆ ಬಿಜೆಪಿ ಆಗ್ರಹ
Advertisement
#WATCH | Delhi: At the launch of his memoir ‘Five Decades of Politics’, Congress leader Sushilkumar Shinde says, “Before I became the Home Minister, I visited him (educationist Vijay Dhar). I used to ask him for advice. He advised me to not roam around but to visit Lal Chowk (in… pic.twitter.com/MJ4QhrKbwa
— ANI (@ANI) September 10, 2024
Advertisement
ಆಗ ನನಗೆ ಭಯವಿತ್ತು, ಆದರೆ ಯಾರಿಗೆ ಹೇಳುವುದು? ಈಗ ನಾನಿದನ್ನು ನಿಮಗೆ ನಗಿಸಲು ಹೇಳುತ್ತಿದ್ದೇನೆ. ಆದ್ರೆ ಆ ಸಮಯದಲ್ಲಿ ನನಗೆ ಭಯವಿತ್ತು. ನಾನು ಲಾಲ್ ಚೌಕ್‌ನಲ್ಲಿ ಶಾಪಿಂಗ್ ಮಾಡಿದೆ. 1978ರಲ್ಲಿ ನಿರ್ಮಾಣವಾದ ಗಡಿಯಾರ ಗೋಪುರಕ್ಕೂ ಭೇಟಿ ನೀಡಿದೆ. 2008 ಮತ್ತು 2010ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಾಗ ಪಾಕಿಸ್ತಾನದ ಧ್ವಜಗಳು ಹಾರಿದ ಸಂದರ್ಭವನ್ನು ನಾನು ನೋಡಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.