ತಿರುವನಂತಪುರಂ: ರಾಜಸ್ಥಾನದಲ್ಲಿ (Rajasthan) ರಾಜಕೀಯ ಬಿಕ್ಕಿಟ್ಟು ಎದುರಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕೇರಳದ (Kerala) ಬೀದಿಗಳಲ್ಲಿ ಮಕ್ಕಳೊಂದಿಗೆ ಫುಟ್‍ಬಾಲ್ ಆಟ ಆಡಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಈ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಾವು ಈ ಮಕ್ಕಳ ಭವಿಷ್ಯವನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲಾ ಕಷ್ಟಗಳನ್ನು ಎದುರಿಸಬೇಕು ಎಂದು ವೀಡಿಯೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಗೋವಾಕ್ಕೆ ಚೋರ್ಲಾ ಘಾಟ್ ಮೂಲಕ ತೆರಳುವ ರಾಜ್ಯದ ಭಾರೀ ವಾಹನಗಳಿಗೆ ತಡೆ
Advertisement
ये भविष्य ही तो संवारना है और इनके लिए हर मुश्किल से टकरा जाना है।#BharatJodoYatra pic.twitter.com/24R5Jvm9gY
— Congress (@INCIndia) September 26, 2022
Advertisement
40 ಸೆಕೆಂಡ್ ಇರುವ ವೀಡಿಯೋದಲ್ಲಿ ನೇರಳೆ ಬಣ್ಣದ ಟೀ ಶರ್ಟ್ ಮತ್ತು ಬಿಳಿ ಬಣ್ಣದ ಶಾಟ್ರ್ಸ್ ಧರಿಸಿರುವ ಮಕ್ಕಳೊಂದಿಗೆ ಪಾಲಕ್ಕಾಡ್‍ನ (Palakkad) ಬೀದಿಗಳಲ್ಲಿ ಫುಟ್‍ಬಾಲ್ ಆಡಿರುವುದನ್ನು ಕಾಣಬಹುದಾಗಿದೆ. ಮಕ್ಕಳೊಂದಿಗೆ (Children) ಕಾಲ್ನಡಿಗೆಯಲ್ಲಿ ಮಾತನಾಡುತ್ತಾ, ಹುಡುಗನೊಬ್ಬನಿಗೆ ತಾವು ಎಸೆಯುವ ಬಾಲ್ ಹಿಡಿದುಕೊಳ್ಳುವಂತೆ ತಿಳಿಸಿ ಬಾಲ್ ಅನ್ನು ಎಸೆದು ಆಟವಾಡಿ ಸಂತೋಷಪಟ್ಟಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದೀಗ ಈ ವೀಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಸಾಕಷ್ಟು ಲೈಕ್ಸ್ ಬಂದಿದೆ.
Advertisement
150 ದಿನಗಳಲ್ಲಿ 3,570 ಕಿ.ಮೀವರೆಗೂ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹೆಜ್ಜೆಹಾಕಲಿದ್ದು, ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ಅಭಿಯಾನ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಇದನ್ನೂ ಓದಿ: ತಾಲೂಕು, ಗ್ರಾಮ ಮಟ್ಟದಲ್ಲೂ `PayCM’ ಅಭಿಯಾನ- ಕಾಂಗ್ರೆಸ್ ನಿಂದ ಮಾಸ್ಟರ್ ಪ್ಲ್ಯಾನ್