ಕಾಲಿವುಡ್‍ನಲ್ಲಿ ಸ್ಟಾರ್ ವಾರ್: ಟ್ವಿಟ್ಟರ್‌ನಲ್ಲಿ ವಿಲಕ್ಷಣ ಟ್ರೆಂಡ್

Public TV
1 Min Read
Vijay AjithKumar

– #RIPactorVIJAY ಟ್ರೆಂಡ್ ಆರಂಭಿಸಿದ ಕಿಡಿಗೇಡಿಗಳು

ಚೆನ್ನೈ: ಕಾಲಿವುಡ್‍ನಲ್ಲಿ ಸ್ಟಾರ್ ವಾರ್ ಆರಂಭವಾಗಿದ್ದು, ತಾವು ನಟ ಅಜಿತ್ ಕುಮಾರ್ ಫ್ಯಾನ್ಸ್ ಅಂತ ಹೇಳಿಕೊಳ್ಳುತ್ತಿರುವ ಕೆಲವರು ಟ್ವಿಟ್ಟರ್‌ ನಲ್ಲಿ ವಿಲಕ್ಷಣ ಟ್ರೆಂಡ್ ಆರಂಭಿಸಿದ್ದಾರೆ.

#RipVIJAY,  #RIPactorVIJAY ಎಂದು ನಟ ದಳಪತಿ ವಿಜಯ್ ವಿರುದ್ಧ ಕಿಡಿಗೇಡಿಗಳು ಟ್ಟಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಸ್ಟಾರ್ ನಟ ಬದುಕಿರುವಾಗ ಆತನ ಸಾವಿಗೆ ವಿಷಾಧ ವ್ಯಕ್ತಪಡಿಸುವ ಮನಸ್ಥಿತಿಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ತಾಲಾ ಅಜಿತ್ ಹಾಗೂ ದಳಪತಿ ವಿಜಯ್ ಅಭಿಮಾನಿಗಳ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಾರ್ ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಕೆಲವು ವರ್ಷಗಳಿಂದ ಆಗಾಗ ಈ ಇಬ್ಬರು ಸ್ಟಾರ್ ಅಭಿಮಾನಿಗಳ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ. ಆದರೆ ಸೋಮವಾರ ಇದು ಅತಿರೇಕಕ್ಕೆ ಹೋಗಿದ್ದು, ಸಾವಿನ ಹಂತಕ್ಕೆ ತಲುಪಿದೆ. ಇಂದು ಬೆಳಗ್ಗೆ ಕೆಲ ಕಿಡಿಗೇಡಿಗಳು ಟ್ವಿಟ್ಟರ್ ವಿಜಯ್ ಇನ್ನಿಲ್ಲ ಎಂದು ಆರಂಭಿಸಿದ್ದರು. ಪರಿಣಾಮ ಅದನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಳಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಫ್ರೆಂಚ್ ಜುವೆಂಟಸ್ ಎಂಬವರು, ಅಜಿತ್ ಅಭಿಮಾನಿಯಾಗಿರುವ ನನ್ನ ಬಗ್ಗೆ ನನಗೆ ಅಸಹ್ಯವೆನಿಸುತ್ತಿದೆ. ಕೆಲ ಗಂಟೆಗಳ ಹಿಂದೆಯಷ್ಟೇ #RipVIJAY ಹ್ಯಾಶ್‍ಟ್ಯಾಗ್ ಬಳಸಿ ಟ್ಟೀಟ್ ಮಾಡಿದೆ. ಈಗ ಅದನ್ನು ಡಿಲಿಟ್ ಮಾಡಿದ್ದೇನೆ. ನಕಾರಾತ್ಮಕ ಮನಸ್ಥಿತಿಯ ಬಗ್ಗೆ ನನಗೆ ಈಗ ಅರ್ಥವಾಗಿದೆ. ನಾನು ನಕಾರಾತ್ಮಕ ಮಸ್ಥಿತಿಯಿಂದ ಕೈಬಿಟ್ಟು, ಪ್ರೀತಿ ಹಂಚುತ್ತೇನೆ. ಲಿವ್ ಲಾಂಗ್ ಆಕ್ಟರ್ ವಿಜಯ್ ಎಂದು ಹೇಳಿದ್ದಾರೆ.

ಸೋಮವಾರ ಬೆಳಗ್ಗೆಯಿಂದಲೇ ಈ ಸ್ಟಾರ್ ವಾರ್ ಆರಂಭವಾಗಿದ್ದರೂ ಇಲ್ಲಿವರೆಗೆ ವಿಜಯ್ ಹಾಗೂ ಅಜಿತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಲಿವುಡ್‍ನಲ್ಲಿ ಹೀಗೆ ನಟರಿಬ್ಬರ ಅಭಿಮಾನಿಗಳು ಸಾವಿನ ಬಗ್ಗೆ ವಿಲಕ್ಷಣ ಮೆರೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಗೌಂಡಮಣಿ ಹಾಗೂ ಸೆಂಥಿಲ್ ಸಾವನ್ನಪ್ಪಿದ್ದಾರೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದರಿಂದ ಆಘಾತಕ್ಕೆ ಒಳಗಾಗಿದ್ದ ನಟರ ಕುಟುಂಬಸ್ಥರು ಕರೆ ಮಾಡಿ ಖಚಿತಪಡಿಸಿಕೊಂಡಿದ್ದರು.

https://twitter.com/AjithKu22162416/status/1155743738557132800

Share This Article
Leave a Comment

Leave a Reply

Your email address will not be published. Required fields are marked *