ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ; 33 ವರ್ಷಗಳ ಹಿಂದಿನ ಫೋಟೊ ವೈರಲ್‌

Public TV
2 Min Read
narendra modi Kanyakumari

– 1991 ರಲ್ಲಿ ಇದೇ ಸ್ಥಳದಿಂದ ನಡೆದಿತ್ತು ‘ಏಕತಾ ಯಾತ್ರೆ’
– ಸ್ವಾಮಿ ವಿವೇಕಾನಂದ ಧ್ಯಾನ ಮಾಡಿದ ಸ್ಥಳದಲ್ಲೇ ಮೋದಿ ಧ್ಯಾನ

ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Elections 2024) ಬಿರುಸಿನ ಪ್ರಚಾರವನ್ನು ಪ್ರಧಾನಿ ಮೋದಿ (Narendra Modi) ಅಂತ್ಯಗೊಳಿಸಿದ್ದಾರೆ. ಕನ್ಯಾಕುಮಾರಿಯಲ್ಲಿ (Kanyakumari) ಇಂದಿನಿಂದ 2 ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ. ಈ ಹೊತ್ತಿನಲ್ಲೇ ಮೋದಿ ಅವರ 33 ವರ್ಷಗಳ ಹಿಂದಿನ ಫೋಟೊ ವೈರಲ್‌ ಆಗಿದೆ.

ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದ ಬಳಿ ಧ್ಯಾನ ಪೀಠಂನಲ್ಲಿ ಪ್ರಧಾನಿ ಮೋದಿ ಅವರು ಇಂದಿನಿಂದ 2 ದಿನ ಧ್ಯಾನ ಮಾಡಲಿದ್ದಾರೆ. ಅದಕ್ಕಾಗಿ ಪ್ರಧಾನಿ ದಕ್ಷಿಣ ಭಾರತಕ್ಕೆ ಭೇಟಿ ನೀಡುವ ಮುನ್ನವೇ ಅವರ 33 ವರ್ಷಗಳ ಹಳೆಯ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿನ ಮೋದಿ ಧ್ಯಾನಕ್ಕೆ ದೀದಿ ಕಟು ಟೀಕೆ

PM Modi to meditate at Kanyakumari for two days on culmination of campaign

ಅದು, 1991 ರ ಡಿಸೆಂಬರ್‌ 11 ರಂದು ತೆಗೆದ ಫೋಟೊ. ಕನ್ಯಾಕುಮಾರಿಯಲ್ಲಿರುವ ಐಕಾನಿಕ್‌ ವಿವೇಕಾನಂದ ರಾಕ್‌ ಮೆಮೋರಿಯಲ್‌ನಿಂದ ಕಾಶ್ಮೀರದ ವರೆಗೆ ‘ಏಕತಾ ಯಾತ್ರೆ’ ಕೈಗೊಳ್ಳಲಾಗಿತ್ತು. ಆಗ ತೆಗೆದ ಫೋಟೊ ಇದು.

ಈಗ ವೈರಲ್‌ ಆಗಿರುವ ಚಿತ್ರದಲ್ಲಿ, ನರೇಂದ್ರ ಮೋದಿ ಮತ್ತು ಪಕ್ಷದ ಹಿರಿಯ ನಾಯಕ ಡಾ. ಮುರಳಿ ಮನೋಹರ್ ಜೋಶಿ ಸೇರಿದಂತೆ ಎಲ್ಲಾ ‘ಏಕತಾ ಯಾತ್ರಿಗಳು’ ಸ್ವಾಮಿ ವಿವೇಕಾನಂದರ ಪ್ರತಿಮೆಯಲ್ಲಿ ಗೌರವ ಸಲ್ಲಿಸುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಜೂನ್‌ 9 ರಂದು ಮೋದಿ ಪ್ರಮಾಣ ವಚನ!

ಏಕತಾ ಯಾತ್ರೆಯನ್ನು 1991 ರ ಡಿಸೆಂಬರ್‌ನಲ್ಲಿ ಕನ್ಯಾಕುಮಾರಿಯಿಂದ ಪ್ರಾರಂಭಿಸಲಾಯಿತು. 1992 ರ ಜನವರಿ 26 ರಂದು ಶ್ರೀನಗರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದರೊಂದಿಗೆ ಮುಕ್ತಾಯಗೊಳಿಸಲಾಗಿತ್ತು. ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಈ ಯಾತ್ರೆಯ ನೇತೃತ್ವ ವಹಿಸಿದ್ದರು. ಆಗ ಬಿಜೆಪಿ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿ ಅವರು ಮೆರವಣಿಗೆಯನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

PM Modi 4

ಭಾರತವು ಭಯೋತ್ಪಾದಕ ಶಕ್ತಿಗಳ ವಿರುದ್ಧ ದೃಢವಾಗಿ ಮತ್ತು ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂಬ ಬಲವಾದ ಸಂದೇಶವನ್ನು ಜಗತ್ತಿಗೆ ರವಾನಿಸುವುದು ಯಾತ್ರೆಯ ಗುರಿಯಾಗಿತ್ತು. 14 ರಾಜ್ಯಗಳನ್ನು ಒಳಗೊಂಡು ಈ ಯಾತ್ರೆ ಸಾಗಿತು. ರಾಷ್ಟ್ರೀಯ ಏಕತೆಗೆ ದೇಶದ ಅಚಲ ಬದ್ಧತೆಯನ್ನು ಯಾತ್ರೆ ಪ್ರತಿಧ್ವನಿಸಿತು. ಇದನ್ನೂ ಓದಿ: ಮೋದಿ ಭಾಷಣ ಪ್ರಧಾನಿ ಕಚೇರಿಯ ಘನತೆ ಕ್ಷೀಣಿಸುವಂತೆ ಮಾಡಿದೆ: ಮನಮೋಹನ್ ಸಿಂಗ್ ಆರೋಪ

1892 ರಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳವಾದ ಧ್ಯಾನ ಮಂಟಪದಲ್ಲಿ ಈಗ ಪ್ರಧಾನಿ ಮೋದಿ ಅವರು 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ. ಆ ಮೂಲಕ ಆಧ್ಯಾತ್ಮಿಕ ಅನುಭೂತಿ ಪಡೆಯಲಿದ್ದಾರೆ. ಹಿಂದೂ ತತ್ವಜ್ಞಾನಿ-ಸಂತನಿಗೆ ಗೌರವ ಸಲ್ಲಿಸಲು ರಾಕ್ ಸ್ಮಾರಕವನ್ನು ನಿರ್ಮಿಸಲಾಗಿದೆ.

Share This Article