ಲಕ್ನೋ: ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಕ್ವಾಲಿಫೈಯರ್‌ಗೆ ತೆಗೆದುಕೊಂಡ ಹೋದ ನಾಯಕ ಜಿತೇಶ್ ಶರ್ಮಾ (Jitesh Sharma) ಆರ್‌ಸಿಬಿಯಲ್ಲಿರುವ (RCB) ಅಣ್ಣನ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
ಆರ್‌ಸಿಬಿಯಲ್ಲಿರುವ ಅಣ್ಣ ಯಾರೂ ಅಲ್ಲ. ದಿನೇಶ್ ಕಾರ್ತಿಕ್ (Dinesh Karthik) ಅವರನ್ನೇ ಜಿತೇಶ್ ಶರ್ಮಾ ಅಣ್ಣ ಎಂದು ಸಂಬೋಧಿಸಿ ಗೌರವ ನೀಡಿದ್ದಾರೆ.
ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಜಿತೇಶ್ ಶರ್ಮಾ ಅವರನ್ನು ಮುರಳಿ ಕಾರ್ತಿಕ್ ಮಾತನಾಡಿಸಿದರು. ಈ ವೇಳೆ, ವಿರಾಟ್ ಕೊಹ್ಲಿ ಔಟಾದಾಗ ನಾನು ಈ ಬಾರಿ ಆಟ ಆಡಲೇಬೇಕು ಎಂದು ನಿರ್ಧರಿಸಿದೆ. ನನ್ನ ಬಳಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇದೆ ಎಂದು ನನ್ನ ಗುರು, ಮಾರ್ಗದರ್ಶಕ ಡಿಕೆ ಅಣ್ಣ ಹೇಳಿ ಹುರಿದುಂಬಿಸಿದರು. ಅದರಂತೆ ನಾನು ನನ್ನ ಆಟವಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: IPL 2025 | ಪಂದ್ಯ ಸೋತು ಹೃದಯ ಗೆದ್ದ ಪಂತ್
ನನಗೆ ಅನಿಸಿಕೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ನಾನು ಆ ರೀತಿಯ ಆಡಿ ಪಂದ್ಯವನ್ನು ಗೆಲ್ಲಿಸಿದ್ದೇನೆ ಎಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: 9 ವರ್ಷಗಳ ಬಳಿಕ ಕ್ವಾಲಿಫೈಯರ್ 1ಗೆ ಲಗ್ಗೆಯಿಟ್ಟ ಆರ್‌ಸಿಬಿ
ಎಲ್ಲಾ ಹೊರೆ ನನ್ನ ಮೇಲಿರುವುದರಿಂದ ನನಗೆ ಒತ್ತಡ ಇತ್ತು. ಆದರೆ ನನ್ನೊಂದಿಗೆ ವಿರಾಟ್, ಕೃನಾಲ್, ಭುವಿ ಇದ್ದಾರೆ. ನಾವು ಚೆನ್ನಾಗಿ ಆಡಲು ಪ್ರಯತ್ನಿಸುತ್ತೇವೆ. ಮುಂದಿನ ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 11.2 ಓವರ್‌ಗಳಲ್ಲಿ 123 ರನ್‌ಗಳಿಸಿದ್ದಾಗ 54 ರನ್(30 ಎಸೆತ, 10 ಬೌಂಡರಿ) ಹೊಡೆದಿದ್ದ ಕೊಹ್ಲಿ ಔಟಾಗಿದ್ದರು. ನಂತರ ಮುರಿಯದ 5ನೇ ವಿಕೆಟಿಗೆ ಮಯಾಂಕ್ ಅಗರ್‌ವಾಲ್ ಮತ್ತು ಜಿತೇಶ್ ಶರ್ಮಾ 45 ಎಸೆತಗಳಲ್ಲಿ 107 ರನ್ ಜೊತೆಯಾಟವಾಡಿ ಪಂದ್ಯವನ್ನು ಗೆಲ್ಲಿಸಿದ್ದಾರೆ.
107 ರನ್‌ಗಳ ಜೊತೆಯಾಟದಲ್ಲಿ ಮಯಾಂಕ್ 12 ಎಸೆತಗಳಲ್ಲಿ 20 ರನ್ ಹೊಡೆದರೆ ಜಿತೇಶ್ ಶರ್ಮಾ 85(33 ಎಸೆತ, 8 ಬೌಂಡರಿ, 6 ಸಿಕ್ಸ್) ಹೊಡೆಯುವ ಮೂಲಕ ಗೆಲುವಿನ ದಡ ಸೇರಿಸಿದರು.