ನವದೆಹಲಿ/ಬೆಳಗಾವಿ: ಒಂದು ದೇಶ ಒಂದು ಚುನಾವಣೆ (One Nation One Election) ವಿಚಾರವಾಗಿ ಕೇಂದ್ರ ಸರ್ಕಾರ ಜಾಣ್ಮೆಯ ಹೆಜ್ಜೆ ಇಟ್ಟಿದೆ. ಇದಕ್ಕೆ ಹಂತ ಹಂತವಾಗಿ ಅನುಮೊದನೆ ಪಡೆಯಲು ನಿರ್ಧಾರ ಮಾಡಿದಂತಿದೆ.
ಸಂಪುಟ ಸಭೆಯಲ್ಲಿ ಕೋವಿಂದ್ (Ram Nath Kovind) ಸಮಿತಿ ಶಿಫಾರಸುಗಳ ಪೈಕಿ ಸಾಂವಿಧಾನಿಕ ತಿದ್ದುಪಡಿ ಅಗತ್ಯವಿರುವ ಮಸೂದೆಯನ್ನು ಪರಿಗಣಿಸಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವನ್ನು ಪಕ್ಕಕ್ಕೆ ಇಟ್ಟಿರುವ ಕೇಂದ್ರ ಸರ್ಕಾರ, ಸದ್ಯಕ್ಕೆ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಸಲು ಅನುವು ಮಾಡಿಕೊಡುವ ಮಸೂದೆ ಮಂಡಿಸಲು ತೀರ್ಮಾನಿಸಿದೆ. ಇದಕ್ಕೆ ಅರ್ಧದಷ್ಟು ರಾಜ್ಯಗಳು ಅನುಮೋದನೆ ನೀಡುವ ಅಗತ್ಯ ಇರುವುದಿಲ್ಲ. ಇದನ್ನೂ ಓದಿ: ಒಂದು ದೇಶ, ಒಂದು ಚುನಾವಣೆ; ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯ 11 ಶಿಫಾರಸುಗಳೇನು?
Advertisement
ಸ್ಥಳೀಯ ಚುನಾವಣೆಗಳ (Election) ಜೊತೆಗೆ ಲೋಕಸಭೆ, ಅಸೆಂಬ್ಲಿ ಚುನಾವಣೆ ನಡೆಸುವುದಾದರೆ ಮಾತ್ರ ಸಂವಿಧಾನಿಕ ತಿದ್ದುಪಡಿ ಮತ್ತು 50% ರಾಜ್ಯಗಳ ಒಪ್ಪಿಗೆ ಪಡೆಯಬೇಕಿದೆ. ಕೇಂದ್ರದ ನಡೆಗೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಇದು ವಿರೋಧ. ಇದನ್ನು ನಮ್ಮ ರಾಷ್ಟ್ರೀಯ ನಾಯಕರು ವಿರೋಧ ಮಾಡಿದ್ದಾರೆ. ಸಣ್ಣ ಹಾಗೂ ಪ್ರಾದೇಶಿಕ ಪಕ್ಷಗಳನ್ನ ಮುಗಿಸಲು ಸಂಚು ಮಾಡಿದ್ದಾರೆ. ಇದು ಬಿಜೆಪಿಯ ಅಜೆಂಡಾ ಎಂದು ಆರೋಪಿಸಿದ್ದಾರೆ.
Advertisement
Advertisement
ಇದೇ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಆದಾನಿ ಪ್ರಕರಣ, ಸೆಬಿ, ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಚರ್ಚೆಗೆ ರೆಡಿ ಇಲ್ಲ. ಇದೆಲ್ಲದರ ಗಮನ ಬೇರೆಡೆ ಸೆಳೆಯಲು ನೀಲಿ ನಕ್ಷೆಯನ್ನ ರೆಡಿ ಮಾಡಿದ್ದಾರಾ? ಇದಕ್ಕೆ ಬೇಕಾದ ಸಿಬ್ಬಂದಿ ಇವಿಎಂ ಮಷಿನ್ ಎಲ್ಲಾ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಸಚಿವ ಸಂತೋಷ್ ಲಾಡ್ ಮಾತನಾಡಿ, ಒನ್ ನೇಷನ್ ಒನ್ ಎಲೆಕ್ಷನ್‍ಗೆ ನೆಹರು ಪ್ರಯತ್ನ ಮಾಡಿದ್ದರು. ಆದು ಸಾಧ್ಯವಾಗಲ್ಲ ಎಂದು ಆಗಲೇ ಗೋತ್ತಾಗಿದೆ. ಇದು ನನ್ನ ವಯಕ್ತಿಕ ಅಭಿಪ್ರಾಯ, ನಾನು ಇದನ್ನ ವಿರೋಧಿಸುತ್ತೇನೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸಾಧ್ಯವಾಗಲ್ಲ. ಇದರಿಂದ ಯುವಕರಿಗೇನು ಲಾಭವಗಲ್ಲ ಎಂದರು. ಇದನ್ನೂ ಓದಿ: ಸರಿಯಾಗಿ ಹಣ ನೀಡದ್ದಕ್ಕೆ ಕಾಂಗ್ರೆಸ್ ಸದಸ್ಯರಿಂದಲೇ ಗಲಾಟೆ: ಅಶೋಕ್ ಕಿಡಿ