ಬೆಳಗಾವಿ: ಕ್ರಿಯಾಶೀಲರಾಗಿ ಕೆಲಸ ಮಾಡಲು, ಎರಡನೇ ನಾಯಕತ್ವ ಕರ್ನಾಟಕಕ್ಕೆ ಬೇಕಾಗಿದೆ. ಯಡಿಯೂರಪ್ಪ ಅವರ ಯುಗ ಮುಗಿದಿದೆ. ಇನ್ನೂ ಮೂರ್ನಾಲ್ಕು ಜನರಿದ್ದಾರೆ. ಅವರ ಅವಧಿ ಮುಗಿಯುತ್ತಾ ಬಂದಿದೆ. ವಾಜಪೇಯಿ ನಂತರ ಮೋದಿ ಬಂದ ಹಾಗೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯತೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎರಡನೇ ನಾಯಕತ್ವ ಪಕ್ಷಕ್ಕೆ ಬೇಕು ಅಂತಾ ಹೇಳಿದ್ದೀನಿ. ಅದಕ್ಕಾಗಿ ಹೊಸ ಪ್ರಕ್ರಿಯೆಯನ್ನ ಮಾಡುತ್ತಿದ್ದಾರೆ. ಪಕ್ಷದ ವರಿಷ್ಠರು ಮುಂದಿನ ಚುನಾವಣೆಗೆ ಒಳ್ಳೆ ಟೀಮ್ ಮಾಡಿ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರಕ್ಕೆ ತರುವ ಪ್ಲಾನ್ ಇಟ್ಟುಕೊಂಡು ಬದಲಾವಣೆ ಮಾಡ್ತಿದ್ದಾರೆ ಎಂದರು. ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನರೇಗಾ ವಿಶ್ವಕ್ಕೆ ಮಾದರಿ: ಕೆ.ಎಸ್.ಈಶ್ವರಪ್ಪ
Advertisement
Advertisement
ರಮೇಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಸ್ಪಷ್ಟಪಡಿಸಿದ ಅವರು, ರಮೇಶ್ ಜಾರಕಿಹೊಳಿ ಎರಡು ಬಾರಿ ವಿಜಯಪುರಕ್ಕೆ ಬಂದಿದ್ದರು. ಒಂದು ಸಾರಿ ನಾವು ಅವರ ಮನೆಗೆ ಹೋಗಬಾರದಾ ಎಂದರು. ಒಮ್ಮೆಯಾದ್ರು ಬಂದು ಊಟ ಮಾಡಿ ಅಂದ್ರು, ಹೋಗಿದ್ದೆ. ಊಟಕ್ಕೆ ಹೋದಾಗ ಮಾಧ್ಯಮದವರ ಕೈಗೆ ಸಿಕ್ಕಿ ಬಿದ್ವಿ. ರಮೇಶ್ ಜಾರಕಿಹೊಳಿ ನಾವು ಏನೂ ಮಾತನಾಡಿಲ್ಲ. ಪಕ್ಷದಲ್ಲಿ ಉಳಿಯಬೇಕು ಅನ್ನೋ ಮನಸ್ಸಿದೆ ಅವರಿಗೆ. ನಾವೆಲ್ಲರೂ ಕೂಡಿ ಪಕ್ಷ ಕಟ್ಟೋಣ ಅನ್ನೋ ಮಾತು ಹೇಳಿದ್ದೀವಿ ಎಂದು ತಿಳಿಸಿದರು.
Advertisement
Advertisement
ಪ್ರಾದೇಶಿಕ ಪಕ್ಷ ಕಟ್ಟುವಷ್ಟು ಹೊಲಸು ಕೆಲಸ ನಾನು ಮಾಡಲ್ಲ, ಅವರೂ ಮಾಡಲ್ಲ. ಈಗಿರುವ ಸಣ್ಣಪುಟ್ಟ ಗೊಂದಲ ಬಗೆಹರಿಸಿ ಒಂದಾಗಿ ಹೋಗಬೇಕು ಎನ್ನುವುದನ್ನು ಬಿಟ್ಟರೆ ಬೇರೇನೂ ಚರ್ಚೆ ಮಾಡಿಲ್ಲ. ಬೆಳಗಾವಿಯಲ್ಲಿ ಬಣ ಇಲ್ಲ. ಊಟಕ್ಕೆ ಹೋದಾಗ, ಬಣ ಅಂದ್ರೆ ಹೇಗೆ? ಸಣ್ಣಪುಟ್ಟ ಸಮಸ್ಯೆ ಇದ್ರೂ ಮುಖ್ಯಮಂತ್ರಿಗಳು ಸರಿ ಮಾಡ್ತಾರೆ. ಕೇಂದ್ರದಲ್ಲಿ ನಾಯಕರು ಎಲ್ಲರಿಗೂ ಕರೆದು ಬುದ್ಧಿ ಹೇಳುವ ಕೆಲಸ ಮಾಡ್ತಾರೆ ಎಂದರು. ಇದನ್ನೂ ಓದಿ: ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಟ್ಟ BBMP!