ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಅಹಮದಾಬಾದ್ ಮತ್ತು ಮುಂಬೈ ನಡುವೆ ಸಂಚರಿಸಲಿರುವ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಬಟನ್ ಒತ್ತುವ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಬುಲೆಟ್ ರೈಲು ಗಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ವಿಶ್ವದಲ್ಲಿರುವ ಬುಲೆಟ್ ರೈಲುಗಳು ಎಷ್ಟು ವೇಗದಲ್ಲಿ ಸಂಚರಿಸುತ್ತದೆ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವನ್ನು ನೀಡಲಾಗಿದೆ.
ವಿಶ್ವದ ಅತೀ ವೇಗದ ರೈಲುಗಳು:
1. ಮ್ಯಾಗ್ಲೆವ್ ಬುಲೆಟ್ ರೈಲು – ಜಪಾನ್: ವಿಶ್ವದಲ್ಲೇ ಅತೀ ವೇಗವಾಗಿ ಹೋಗುವ ರೈಲಾಗಿದ್ದು, 2015 ರಲ್ಲಿ ಆರಂಭವಾಗಿದೆ. ಸುಮಾರು 900 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, 603 ಕಿ.ಮೀ. ದೂರವನ್ನು ಒಂದು ಗಂಟೆಗಳಲ್ಲಿ ಕ್ರಮಿಸುತ್ತದೆ. ಅಂದರೆ ಈ ರೈಲು ಬೆಂಗಳೂರಿನಿಂದ ಮಂಗಳೂರಿಗೆ ಹೊರಟರೆ ಕೇವಲ 40 ನಿಮಿಷಗಳಲ್ಲಿ ಕ್ರಮಿಸಬಹುದು.
Advertisement
Advertisement
2. ಎಲ್‍ಜಿವಿ (ಲಿಗ್ನೇ ಗ್ರ್ಯಾಂಡೆ ವಿಟೇಸ್) ಈಸ್ಟ್ – ಫ್ರಾನ್ಸ್: ಫ್ರೆಂಚ್‍ನ ವೇಗದ ಬುಲೆಟ್ ರೈಲಾಗಿದ್ದು, 2007 ರಲ್ಲಿ ಪರಿಶೀಲಿಸಿ ನಂತರ ಪ್ರಾರಂಭ ಮಾಡಲಾಯಿತು. ಇದು ಗಂಟೆಗೆ 574 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ.
Advertisement
Advertisement
3. ಎಲ್‍ಜಿವಿ ಅಟ್ಲಾಂಟಿಕ್ – ಫ್ರಾನ್ಸ್: ವಿಶ್ವದ ಮೂರನೇ ಅತೀ ವೇಗದ ರೈಲಾಗಿದೆ. 1989-1990 ರಲ್ಲಿ ಪ್ರಾರಂಭವಾಗಿದ್ದು, ಸುಮಾರು 515 ಕಿ.ಮೀ ದೂರವನ್ನು 1 ಗಂಟೆಯಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
4. ಬೀಜಿಂಗ್-ಶಾಂಘೈ ಎಚ್‍ಎಸ್‍ಆರ್, ಸಿಆರ್‍ಎಚ್380ಎ – ಚೀನಾ: ಬೀಜಿಂಗ್ ಮತ್ತು ಶಾಂಘೈ ನಡುವೆ ಸುಮಾರು 487 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಆದರೆ ಸಾಮಾನ್ಯ ಕಾರ್ಯಾಚರಣೆಯಲ್ಲಿ 400 ಕಿ.ಮೀ ಹಚ್ಚಿನ ವೇಗವನ್ನು ದಾಟುವುದಿಲ್ಲ. ಈ ರೈಲು 494 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
5. ಟಿಆರ್-09 – ಜರ್ಮನಿ: ಇದು 450 ಕಿ.ಮೀ. ಅನ್ನು 1 ಗಂಟೆಯಲ್ಲಿ ವೇಗವಾಗಿ ಚಲಿಸುತ್ತದೆ ಹಾಗೂ 500 ಕಿ.ಮೀ ವರೆಗೆ ಗರಿಷ್ಟ ವೇಗದಲ್ಲು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
6. ಶಿಂಕಾನ್ಸೆನ – ಜಪಾನ್: ಇದು 425-445 ಕಿ.ಮೀ. ದೂರವನ್ನು ಒಂದು ಗಂಟೆಯಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಜಪಾನ್ ನಲ್ಲಿ ಬಹು ನಗರಗಳನ್ನು ಈ ರೈಲು ಸಂಪರ್ಕಿಸುತ್ತದೆ.
ಗತಿಮಾನ್ ಎಕ್ಸ್ ಪ್ರೆಸ್: ಭಾರತದಲ್ಲಿ ಸದ್ಯಕ್ಕೆ ಅತಿ ವೇಗದಲ್ಲಿ ಚಲಿಸುವ ರೈಲು ಎಂಬ ಹೆಗ್ಗಳಿಕಿ ಗತಿಮಾನ್ ಎಕ್ಸ್ ಪ್ರೆಸ್ ರೈಲಿಗಿದೆ. 2016ರ ಏಪ್ರಿಲ್ ನಲ್ಲಿ ಈ ರೈಲಿನ ಸಂಚಾರ ಆರಂಭಗೊಂಡಿದ್ದು ದೆಹಲಿ-ಆಗ್ರ ನಡುವೆ 160 ಕಿ.ಮೀ ದೂರವನ್ನು 1 ಗಂಟೆಯಲ್ಲಿ ಕ್ರಮಿಸುತ್ತದೆ.
ಇದನ್ನೂ ಓದಿ: ಬುಲೆಟ್ ರೈಲು ಯೋಜನೆಗೆ ಅಡಿಗಲ್ಲು: ನೀವು ತಿಳಿದುಕೊಳ್ಳಲೇಬೇಕಾದ 10 ವಿಚಾರಗಳು ಇಲ್ಲಿದೆ
How will the #BulletTrain look like? A first look… pic.twitter.com/xZVyxijWLV
— PIB India (@PIB_India) September 15, 2017