ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾ ರಾಜ್ಯ ಆಗಿ ಬದಲಾವಣೆ: ಕಟೀಲ್ ಕಿಡಿ

Public TV
1 Min Read
NALIN KUMAR KATEEL 1

– ಪೊಲೀಸರು ಖಾಕಿ ಹಾಕಿದ್ದಾರಾ ಅಥವಾ ಕಾಂಗ್ರೆಸ್ ಬಟ್ಟೆ ಹಾಕಿದ್ದಾರಾ?

ಆನೇಕಲ್: ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾ ರಾಜ್ಯ ಆಗಿ ಬದಲಾವಣೆ ಆಗುತ್ತಿದೆ. ದೇಶದ್ರೋಹಿಗಳು ಪಾಕಿಸ್ತಾನ (Pakistan) ಕ್ಕೆ ಜೈ ಎನ್ನುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಹಲವು ಕಡೆ ಗೂಂಡಾಗಿರಿ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದ್ದಾರೆ.

ಹೊಸಕೋಟೆ ಕ್ಷೇತ್ರ (Hosakote Constituency) ದ ಡಿ ಶೆಟ್ಟಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೋತ್ಸವ ನೆಪದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಪಟಾಕಿ ಸಿಡಿಸಬೇಡಿ ಎಂದಿದ್ದಕ್ಕೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ದಾಳಿಯಾಗಿದೆ. ಹೊಸಕೋಟೆ ಕ್ಷೇತ್ರದ ಡಿ ಶೆಟ್ಟಹಳ್ಳಿ ವಾಸಿ ಕೃಷ್ಣಪ್ಪ ಮತ್ತು ಮಗ ಬಾಬು ಮೇಲೆ ದಾಳಿಯಾಗಿದ್ದು, ಘಟನೆಯಲ್ಲಿ ಕೃಷ್ಣಪ್ಪ ಸಾವನ್ನಪ್ಪಿದ್ದಾರೆ. ಅವರ ಮಗ ಬಾಬು ಸ್ಥಿತಿ ಗಂಭೀರವಾಗಿದೆ ಎಂದರು.

ಕೃಷ್ಣಪ್ಪನ ಪತ್ನಿ ಗಂಗಮ್ಮನ ಮೇಲೂ ಹಲ್ಲೆಯಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಖಂಡಿಸುತ್ತೆವೆ. ಪೊಲೀಸರು ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು. ಪೊಲೀಸರು ಖಾಕಿ ಹಾಕಿದ್ದಾರಾ ಅಥವಾ ಕಾಂಗ್ರೆಸ್ ಬಟ್ಟೆ ಹಾಕಿದ್ದಾರಾ. ಕಾಂಗ್ರೆಸ್ಸಿಗರು ಅಧಿಕಾರದ ಹಗ್ಗ ಜಗ್ಗಾಟದಲ್ಲಿ ಜನರ ಹಿತ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಮಾಜಿ ಸಚಿವ ರಮಾನಾಥ್ ರೈ

ಸಿಎಂ ಕುರ್ಚಿಗಾಗಿ ದೇಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಕಾಂಗ್ರೆಸ್ಸಿಗರ ಹೈಡ್ರಾಮಾದ ಬಗ್ಗೆ ನಾನು ಈ ಮೊದಲೇ ಹೇಳಿದ್ದೆ. ಇದೇ ಸ್ಥಿತಿ ಮುಂದುವರಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

Share This Article