ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಭಾನುವಾರ ಹಸಿವನ್ನು ನೀಗಿಸುವ ಕಾರ್ಯಕ್ರಮವನ್ನು ಆರಂಭಿಸಿದ್ದು, ಜನತೆಗೆ ಗೋಧಿಯನ್ನು ನೀಡಿದೆ.
ಅಫ್ಘಾನ್ ನ ಈ ಯೋಜನೆಯು ನಗರದ ಪ್ರಮುಖ ಪಟ್ಟಣಗಳು ಮತ್ತು ನಗರಗಳ ಸುತ್ತ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿಯೂ ಅಫ್ಘಾನ್ ನ ರಾಜಧಾನಿಯಲ್ಲಿ ಮಾತ್ರ 40,000 ಪುರುಷರಿಗೆ ಉದ್ಯೋಗ ನೀಡಲಾಗುವುದು ಎಂದು ತಾಲಿಬಾನ್‍ನ ಮುಖ್ಯ ವಕ್ತಾರರು ದಕ್ಷಿಣ ಕಾಬೂಲ್‍ನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಈ ಕುರಿತು ಮಾತನಾಡಿದ ಜಬಿಹುಲ್ಲಾ ಮುಜಾಹಿದ್, ನಿರುದ್ಯೋಗದ ವಿರುದ್ಧ ಹೋರಾಡಲು ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಪರಿಣಾಮ ಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಸಾಗರದ ಮಾಲ್ವೆ ಬಳಿ ಕಾರು ಅಪಘಾತ – ಚಾಲಕ ಸ್ಥಳದಲ್ಲೇ ಸಾವು
ಅಫ್ಘಾನಿಸ್ತಾನ ಈಗಾಗಲೇ ಬಡತನ, ಬರ, ವಿದ್ಯುತ್ ಸಮಸ್ಯೆ ಮತ್ತು ವಿಫಲ ಆರ್ಥಿಕ ವ್ಯವಸ್ಥೆಯಿಂದ ಬಳಲುತ್ತಿದ್ದು, ಈಗ ಕಠಿಣ ಚಳಿಗಾಲವನ್ನು ಎದುರಿಸುತ್ತಿದೆ. ತಾಲಿಬಾನ್‍ನ ಆಹಾರ ಯೋಜನೆಯ ಕೆಲಸಕ್ಕಾಗಿ ಕಾರ್ಮಿಕರಿಗೆ ವೇತನವನ್ನು ನೀಡುತ್ತಿಲ್ಲ. ಪ್ರಸ್ತುತ ನಿರುದ್ಯೋಗಿಗಳು ಮತ್ತು ಚಳಿಗಾಲದಲ್ಲಿ ಹಸಿವಿನಿಂದ ಬಳಲುತ್ತಿರುವವರನ್ನು ಗುರಿಯಾಗಿಸಿಕೊಂಡು ಈ ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಎರಡು ತಿಂಗಳ ಕಾರ್ಯಕ್ರಮದಿಂದ ರಾಜಧಾನಿಯಲ್ಲಿ 11,600 ಟನ್ ಗೋಧಿಯನ್ನು ವಿತರಿಸಲಾಗಿದೆ. ಹೆರಾತ್, ಜಲಾಲಾಬಾದ್, ಕಂದಹಾರ್, ಮಜರ್-ಐ-ಷರೀಫ್ ಮತ್ತು ಪೋಲ್-ಐ-ಖೋಮ್ರಿ ಸೇರಿದಂತೆ ದೇಶದ ಇತರೆಡೆಗಳಿಗೆ ಸುಮಾರು 55,000 ಟನ್‍ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ರಾಜಧಾನಿಯ ಗ್ರಾಮೀಣ ರಿಶ್ ಖೋರ್ ಪ್ರದೇಶದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಮುಜಾಹಿದ್, ಕೃಷಿ ಸಚಿವ ಅಬ್ದುಲ್ ರಹ್ಮಾನ್ ರಶೀದ್ ಮತ್ತು ಕಾಬೂಲ್ ಮೇಯರ್ ಹಮ್ದುಲ್ಲಾ ನೊಮಾನಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಆಗಮಿಸಿದ್ದರು. ಇದನ್ನೂ ಓದಿ: ತೋಳನಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ವಹಿಸಿ: ಶೆಟ್ಟರ್ ಸೂಚನೆ