ಬೆಂಗಳೂರು: ಜನಪ್ರತಿನಿಧಿಯಾಗಿ ಜನರ ಸಮಸ್ಯೆ ಬಗ್ಗೆ ಟ್ವೀಟ್ (Tweet) ಮಾಡಿ ಸರಿ ಮಾಡಲು ಹೇಳಿದ್ದೇನೆ. ಇದಕ್ಕೆ ಬೇರೆ ಬಣ್ಣ ಕಟ್ಟೋದು ಬೇಡ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ತಮ್ಮ ಏರಿಯಾದ ರಸ್ತೆ ಗುಂಡಿ ಮುಚ್ಚುವ ಬಗ್ಗೆ ಟ್ವೀಟ್ ಮಾಡಿದ್ದ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, ಸಾರ್ವಜನಿಕರ ಪರವಾಗಿ ಅಧಿಕಾರಿಗಳಿಗೆ ಮಾಹಿತಿ ಕೊಡುವ ಪ್ರಯತ್ನ ಮಾಡಿದ್ದೇನೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು. ಅಧಿಕಾರಿಗಳಿಗೆ ಮಾಹಿತಿ ಕೊಡೋಕೆ ನಾನಾ ಮಾರ್ಗಗಳು ಇವೆ. ಫೋನ್ ಮಾಡಬಹುದು, ಪತ್ರ ಬರೆಯಬಹುದು. ವೀಡಿಯೋ ಕಳುಹಿಸಬಹುದು. ನಾವು ಅದನ್ನು ಅವರ ಗಮನಕ್ಕೆ ತಂದಿದ್ದೇನೆ. ನನ್ನ ಕ್ಷೇತ್ರದಲ್ಲಿ ಜನ ಸಮಸ್ಯೆ ತಂದಿದ್ದರು. ಅದನ್ನು ಸರಿ ಮಾಡಲು ಹೇಳಿದ್ದೇನೆ. ಅದಕ್ಕೆ ನೀವು ಬಣ್ಣ ಕಟ್ಟಿ ಏನೇನೋ ಹೇಳಿದರೆ ಅದು ಅವರಿಗೆ ಬಿಟ್ಟದ್ದು. ನಮಗೆ ಜನರ ಕೆಲಸ ಸರ್ಕಾರದಿಂದ ಆಗಬೇಕು. ಆ ಒಂದು ಪ್ರಯತ್ನ ನಾನು ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದಲ್ಲಿ ಸದ್ಯಕ್ಕೆ ಉಪಚುನಾವಣೆ ಇಲ್ಲ
Advertisement
ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. @bbmpcommr ಅಥವಾ @BMRCL MD ಯಾರಾದ್ರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ. pic.twitter.com/qRDqy5NEzZ
— Krishna Byre Gowda (@krishnabgowda) August 14, 2024
Advertisement
ಸಚಿವರ ಟ್ವೀಟ್‌ಗೆ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಲಸ ಆಗೋದು ಮುಖ್ಯನಾ? ಹೇಗೆ ಆಯ್ತು ಅನ್ನೋದು ಮುಖ್ಯನಾ? ಜನಕ್ಕೆ ಸಮಸ್ಯೆ ಪರಿಹಾರ ಆಗಬೇಕು. ಯಾವ ಮೂಲದಿಂದ ಆಗುತ್ತೆ ಅನ್ನೋದು ಎರಡನೇ ವಿಚಾರ. ಜನ ಪ್ರತಿನಿಧಿಯಾಗಿ ಜನರ ಸಮಸ್ಯೆ ಪರಿಹಾರ ಮಾಡೋದು ನನ್ನ ಕೆಲಸ. ಜನರ ಪರವಾಗಿ ನಾನು ಕೆಲಸ ಮಾಡಿದ್ದೇನೆ. ನಾನು ಆಯುಕ್ತರಿಗೆ ಅನೇಕ ಬಾರಿ ಈ ವಿಷಯ ಹೇಳಿದ್ದೆ. ಅವರಿಗೆ ಚಿತ್ರಣ ಕಳುಹಿಸಿಕೊಡೋಣ ಅಂತ ವೀಡಿಯೋ ಕಳುಹಿಸಿದೆ. ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಕೆಲಸ ಆಗಬೇಕು ಅನ್ನೋದು ಮುಖ್ಯ ಎಂದು ಹೇಳಿದರು. ಇದನ್ನೂ ಓದಿ: Assembly elections 2024: ಜಮ್ಮು-ಕಾಶ್ಮೀರದಲ್ಲಿ 3 ಹಂತ, ಹರಿಯಾಣದಲ್ಲಿ ಅ.1ಕ್ಕೆ ಮತದಾನ
Advertisement
Advertisement
ಸರಿಯಾಗಿ ಕೆಲಸ ಆಗಬೇಕು ಎಂಬುದು ನಮ್ಮ ಉದ್ದೇಶ. ಡಿಸಿಎಂ ಸೂಚನೆ ಕೊಟ್ಟಿದ್ದಾರೆ. ಸಿಎಂ ಕೂಡ ಸೂಚನೆ ಕೊಟ್ಟಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಈ ಬಾರಿ ಜಾಸ್ತಿ ಮಳೆ ಆಗುತ್ತದೆ ಎಂದು ನಾನು ಬಿಬಿಎಂಪಿಗೆ ಪತ್ರ ಬರೆದಿದ್ದೆ. ಅದಕ್ಕೆ ರೆಡಿಯಾಗಬೇಕು ಎಂದು ಪತ್ರ ಬರೆದಿದ್ದೆ. ಸರ್ಕಾರ ನಮ್ಮದು. ಆದರೆ ನಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡಿ ಸರ್ಕಾರಕ್ಕೆ ತೊಂದರೆ ಆಗಬಾರದು. ನನ್ನ ಮೊದಲ ಆದ್ಯತೆ ಜನರಿಗೆ, ಆಮೇಲೆ ಸರ್ಕಾರ. ಜನರಿಗೆ ನಾವು ಜನಪ್ರತಿನಿಧಿಯಾಗಿ ನಮ್ಮ ಮೊದಲ ಆದ್ಯತೆ ಇರಬೇಕು. ಅ ಪ್ರಜ್ಞೆ ನನಗೆ ಇದೆ. ಸರ್ಕಾರಕ್ಕೆ ಹೆಸರು ಬರಬೇಕಾದರೆ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ಅವರನ್ನು ಎಚ್ಚರಿಸುವ ಕೆಲಸ ಮಾಡಿದ್ದೇನೆ ಎಂದು ತಾವು ಮಾಡಿದ ಟ್ವೀಟ್ ಸಮರ್ಥಿಸಿಕೊಂಡರು. ಇದನ್ನೂ ಓದಿ: ರಾಜ್ಯದ ಸರ್ಕಾರಿ ನೌಕರರು ಇನ್ಮುಂದೆ ಕೆಂಪು-ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಧರಿಸಬೇಕು!