ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಭರ್ಜರಿಯಿಂದ ಸಾಗುತ್ತಿದೆ. ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.
ಹಿರಿಯರು, ಮಹಿಳೆಯರು, ಯುವಕರು ಹಾಗೂ ಸಿನಿಮಾ ನಟ-ನಟಿಯರು ಮತದಾನ ಮಾಡುತ್ತಿದ್ದು, ನಟ, ನಿರ್ದೇಶಕ ಉಪೇಂದ್ರ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಪಕ್ಷ ಮಾಡುವಾಗಲೂ ಪ್ರಜೆಯಾಗಿ ಮಾಡಿದ್ದೇನೆ. ನಾಯಕನಾಗಿ ಅಲ್ಲ. ಪ್ರಜೆಗಳಿಗೂ ನಾನು ಇದೇ ಹೇಳಿದ್ದಾನೆ.
Advertisement
ಇವತ್ತು ಒಂದು ದಿನ ನಾನು ಪ್ರಜೆ. ಪ್ರತಿ 5 ವರ್ಷಗೊಮ್ಮೆ ಮತದಾನ ಮಾಡಲು ಅವಕಾಶ ಬರುತ್ತದೆ. ಆದ್ದರಿಂದ ನನಗೆ ಇಂದು ವೋಟ್ ಮಾಡಲು ತುಂಬಾ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ರಾಜಕೀಯದ ಬಗ್ಗೆ ಮಾತನಾಡಿದ ಅವರು, ನಮ್ಮ ರಾಜ್ಯ ರಾಜಕೀಯದ ಬಗ್ಗೆ ಪ್ರಜೆಗಳಿಗೆ ತಿಳಿದಿದ್ದರು. ಇಂದು 60% ಜನರು ಮತದಾನ ಮಾಡುತ್ತಾರೆ ಎಂದರೆ ಅದು ನಿಜವಾಗಿಯೂ ಗ್ರೇಟ್ ಆಗಿದೆ.
Advertisement
Advertisement
ಈ ದೇಶದವರು ತಮ್ಮ ಭರವಸೆಯನ್ನು ಕಳೆದುಕೊಂಡಿಲ್ಲ. ಈ ದೇಶ ಗ್ರೇಟೆಸ್ಟ್ ಆಗಿದೆ. ಇಲ್ಲಿ ಎಲ್ಲಾ ವಿಚಾರಗಳಿಗೂ ಆಧರಣೆ ಇದೆ. ಆದ್ದರಿಂದ ವಿಶ್ವದ ಗುರು ಈ ದೇಶ. ಇದೊಂದು ಭರವಸೆಯ ದೇಶವಾಗಿದೆ. ಈ ದೇಶದಲ್ಲಿ ಎಷ್ಟೇ ಬಡತನ, ಕಷ್ಟ ಇದ್ದರೂ ಬೇರೆ ಶ್ರೀಮಂತ ದೇಶಕ್ಕೆ ಹೋಗಿ ಬಂದಾಗ ಬೇಸರವಾಗುತ್ತದೆ. ಆದ್ದರಿಂದ ನಿಜವಾಗಿಯೂ ಭಾರತದವರು ತುಂಬಾ ಖುಷಿಯಾಗಿದ್ದಾರೆ ಎನ್ನಿಸುತ್ತದೆ ಎಂದ್ರು.
Advertisement
ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ಇಂದು ನಿರ್ಧರಿಸಲಿದ್ದಾರೆ.