ಬಿಗ್ ಬಾಸ್ ಮನೆಯಲ್ಲಿ(Bigg Boss House) ಪ್ರತಿ ಸ್ಪರ್ಧಿ ಕೂಡ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಿದ್ದಾರೆ. ಗುರೂಜಿ ಇರುವ ನೋಡಿ ಹೀಯಾಳಿಸಿದ್ದ ಮನೆಮಂದಿಯ ಮುಂದೆ ತಾನೆಂತಹ ಗಟ್ಟಿ ಸ್ಪರ್ಧಿ ಎಂಬುದನ್ನ ಓಟಿಟಿಯಲ್ಲಿ ತೋರಿಸಿಕೊಟ್ಟಿದ್ದರು. ಸಾಕಷ್ಟು ಜಟಾಪಟಿ ಮಧ್ಯೆ ಇದೀಗ ಗುರೂಜಿ ಕ್ಯಾಪ್ಟನ್ ಆಗಿದ್ದಾರೆ. ಆದರೀಗ ರೂಪೇಶ್‌ಗೆ (Roopesh Shetty) ಮನೆಯಿಂದ ಹೋಗುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಅಡುಗೆ, ಆಟ, ಮಾತು ಎಲ್ಲದರಲ್ಲೂ ಮಾಸ್ಟರ್ ಮೈಂಡ್ ಆಗಿರುವ ಆರ್ಯವರ್ಧನ್ ಗುರೂಜಿಗೆ(Aryavardhan Guruji) ಬಿಗ್ ಬಾಸ್ ಮನೆ ಸಾಕಾಗಿದೆಯಂತೆ. ತಮ್ಮ ನೇರ ಮಾತಿನ ಮೂಲಕ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿರುವ ಗುರೂಜಿಗೆ ಅದೇನು ಕಾಡ್ತಿದೆಯೋ ತಮ್ಮ ಮನೆಯತ್ತ ಹೋಗಲು ಮನಸ್ಸು ಮಾಡಿದ್ದಾರೆ. ದೊಡ್ಮನೆಯ ಆಟಕ್ಕೆ ಅಂತ್ಯ ಹಾಡಿ, ಮಗಳನ್ನ ನೋಡುವ ತವಕ ಜಾಸ್ತಿ ಆಗಿದೆ. ಇದೀಗ ಬಿಗ್ ಮನೆಯಿಂದ ಹೊರ ಹೋಗುವುದಾಗಿ ರೂಪೇಶ್ ಶೆಟ್ಟಿ ಬಳಿ ಗುರೂಜಿ ಹೇಳಿಕೊಂಡಿದ್ದಾರೆ.
ಈಗ ಮೂರನೇ ವಾರದತ್ತ ಮುನ್ನುಗ್ಗುತ್ತಿರುವ ದೊಡ್ಮನೆಯಲ್ಲಿ ಗುರೂಜಿ ಅವರು ಕ್ಯಾಪ್ಟನ್ ಆಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಹಾಗಾಗಿ ಅವರ ಹೆಸರನ್ನು ನಾಮಿನೇಷನ್‌ಗೆ ತೆಗೆದುಕೊಳ್ಳುವಂತಿರಲಿಲ್ಲ. ಈ ವಾರ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ದರ್ಶ್ ಚಂದ್ರಪ್ಪ, ದಿವ್ಯಾ ಉರುಡುಗ, ಮಯೂರಿ, ಗೊಬ್ಬರಗಾಲ, ದೀಪಿಕಾ, ರೂಪೇಶ್ ಶೆಟ್ಟಿ, ಅಮೂಲ್ಯ ಹಾಗೂ ಅನುಪಮಾ ಅವರು ನಾಮಿನೇಷನ್ ಲಿಸ್ಟ್‌ನಲ್ಲಿದ್ದಾರೆ. ಇನ್ನು ವೋಟ್ ಪಡೆದ ಒಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ. ಆದರೆ, ಈ ವಾರ ಗುರೂಜಿ ತಾವು ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. ಇದನ್ನೂ ಓದಿ:`ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಿದ ಅಣ್ಣಾವ್ರ ಕುಟುಂಬ
ಈ ವಾರ ನನ್ನನ್ನು ಕಳಿಸಿಕೊಡಿ ಅಂತ ಕೇಳ್ತೀನಿ ಎಂದು ಗುರೂಜಿ, ರೂಪೇಶ್ ಬಳಿ ಹೇಳಿಕೊಂಡಿದ್ದಾರೆ. ಆರಾಮಾಗಿ ಇದೀರಲ್ಲ. ಮತ್ಯಾಕೆ ಹೋಗೋ ಚಿಂತೆ ನಿಮಗೆ ಈಗ ಮನೆಯಿಂದ ಔಟ್ ಆದ್ರೆ ಮತ್ತೆ ನೀವು ಬರೋಕೆ ಆಗಲ್ಲ ಎಂದು ಹೇಳಿದರು ರೂಪೇಶ್. ಆಯ್ಕೆ ಇದ್ರೆ ಕಳಿಸಿಕೊಡಿ ಎಂದು ಕೇಳ್ತಿನಿ. ಹಾಗೆ ಆಯ್ಕೆ ಇಲ್ಲ ಅಂದ್ರೆ ಇಲ್ಲೇ ಮುಂದುವರಿಯುತ್ತೀನಿ. ನಾನು ಮನೆಯಿಂದ ಹೊರಹೋಗಬೇಕು. ಇಲ್ಲಿಗೆ ಬಂದು ಏನು ಆಗಬೇಕಿಲ್ಲ. 10 ವಾರ ಇದ್ರೂ ನನ್ನ ವ್ಯಕ್ತಿತ್ವ ಇರೋದು ಹೀಗೆ. ಇಷ್ಟು ದಿನ ಇದ್ದಿದ್ದು ಖುಷಿ ನೀಡಿದೆ ಎಂದು ಗುರೂಜಿ ಹೇಳಿದ್ದಾರೆ.