ಚಿತ್ರ ವಿಚಿತ್ರ, ವಿಭಿನ್ನ ಟಾಸ್ಕ್ ಕೊಡೊವುದರಲ್ಲಿ ಬಿಗ್ ಬಾಸ್ (Big Boss) ಯಾವಾಗಲೂ ಮುಂದು. ಎಲ್ಲೂ ನೋಡಿರದ ಡಿಫರೆಂಟ್ ಟಾಸ್ಕ್ ಗಳನ್ನು ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಕೊಡುತ್ತಾರೆ. ಇದೀಗ ಭಿನ್ನವಾಗಿ ಟಾಸ್ಕ್ ಗಳನ್ನು ಕೊಡುವ ಬಗ್ಗೆ ಗುರೂಜಿ, ರೂಪೇಶ್ ಶೆಟ್ಟಿ (Rupesh Shetty) ಮತ್ತು ದಿವ್ಯಾ (Divya) ಮಾತನಾಡಿದ್ದಾರೆ. ಆಗ ಸಣ್ಣ ಬುದ್ಧಿ ಮಾತನಾಡಬೇಡ ಎಂದು ದಿವ್ಯಾಗೆ ಆರ್ಯವರ್ಧನ್ ಗುರೂಜಿ ಅವಾಜ್ ಹಾಕಿದ್ದಾರೆ.
95 ದಿನಗಳನ್ನು ಪೂರೈಸಿರುವ ದೊಡ್ಮನೆಯ ಆಟ ಇದೀಗ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವ ಈ ವೇಳೆಯಲ್ಲಿ ಬಿಗ್ ಬಾಸ್ ಕೊಡುತ್ತಿರುವ ಟಾಸ್ಕ್ ನೋಡಿ ಮನೆಮಂದಿ ದಂಗಾಗಿದ್ದಾರೆ. ಟಾಸ್ಕ್ ಮಾಡುವ ಟೀಮ್ ವಿಚಾರದ ಬಗ್ಗೆ ಮಾತನಾಡುವಾಗ ಗುರೂಜಿಗೂ (Aryavardhan Guruji) ದಿವ್ಯಾಗೂ ಮಾತಿನ ಚಕಮಕಿ ನಡೆದಿದೆ. ಈ ವೇಳೆ ದಿವ್ಯಾಗೆ ಗುರೂಜಿ ಅವಾಜ್ ಹಾಕಿದ್ದಾರೆ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?
ಕ್ರಿಯೇಟಿವ್ ಆಗಿ ಟಾಸ್ಕ್ ಗಳನ್ನು ಸೃಷ್ಟಿಸುವ ಟೀಮ್ ನ ಮೀಟ್ ಮಾಡಬೇಕು ಎಂದು ರೂಪೇಶ್ ಶೆಟ್ಟಿ ಹೇಳುತ್ತಾರೆ. ಆಗ ಗುರೂಜಿ, ಅವರೆಲ್ಲಾ ಇಲ್ಲಿ ಎಲ್ಲಿ ಇರುತ್ತಾರೆ. ಇಂಡಿಯಾದಲ್ಲೇ ಇರಲ್ಲವೇನೋ ಎಂದು ಹೇಳಿದ್ದಾರೆ. ನಾಲ್ಕನೇ ವ್ಯಕ್ತಿಯಿಂದ ಟಾಸ್ಕ್ ಬರುತ್ತೆ ಎಂದು ಟಾಸ್ಕ್ ಗಳನ್ನು ಕ್ರಿಯೇಟ್ ಮಾಡುವ ಟೀಮ್ ಬಗ್ಗೆ ಚರ್ಚೆ ನಡೆಯುತ್ತದೆ. ಟಾಸ್ಕ್ ಎಲ್ಲಿಂದ ಬರುತ್ತವೆ ಎನ್ನುವ ಕುರಿತು ಮಾತುಕತೆ ಆಗುತ್ತದೆ.
ಈ ವೇಳೆ ಟಾಸ್ಕ್ ಕ್ರಿಯೇಟ್ ಮಾಡೋಕೆ ಎಂದೇ ಒಂದು ಕ್ರಿಯೇಟಿವ್ ಟೀಮ್ ಇದೆ ಗುರೂಜಿ ಎಂದು ದಿವ್ಯಾ ಹೇಳುತ್ತಾರೆ. ಇದರ ಬಗ್ಗೆ ಮಾತನಾಡುವಾಗ ಮಾತಿನ ಚಕಮಕಿ ಜೋರಾಗಿದೆ. ಆಗ ಸಣ್ಣ ಬುದ್ಧಿ ಮಾತನಾಡಬೇಡ, ನನ್ನ ಮಾತು ಕೇಳು, ನಾನು ಇಂಟರ್ ನ್ಯಾಷನಲ್ ಬ್ರೇನ್ ಬಗ್ಗೆ ಮಾತನಾಡುತ್ತಿದ್ದೀನಿ, ಇದನ್ನ ಕೇಳು ಅಂದ್ರೆ ನನ್ನ ಹತ್ತಿರನೇ ವಾದ ಮಾಡುತ್ತೀಯಾ ಎಂದು ದಿವ್ಯಾಗೆ ಗುರೂಜಿ ಕ್ಲಾಸ್ ತೆಗೆದುಕೊಂಡಿದ್ದಾರೆ.