ಬಿಗ್ ಬಾಸ್ (Bigg boss) ಮನೆಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan guruji) ಸಾಕಷ್ಟು ವಿಚಾರವಾಗಿ ಹೈಲೈಟ್ ಆಗಿದ್ದಾರೆ. ಗುರೂಜಿ ಒಳಗೊಬ್ಬ ಒಳ್ಳೆಯ ಕಾಮಿಡಿಯನ್ ಇದ್ದಾರೆ ಎಂಬುದು ಮತ್ತೆ ಪ್ರೂವ್ ಮಾಡಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಆ ಕಾಮಿಡಿ ಮ್ಯಾನ್ ಹೆಚ್ಚಾಗಿನೆ ಹೊರಗೆ ಬಂದಿದ್ದಾನೆ. ಗುರೂಜಿ ತಮ್ಮ ಆಟದ ಜೊತೆ ಅವರ ಕಾಮಿಡಿ ಕಿಕ್‌ಗೆ ಮನೆ ಮಂದಿ ತಲೆ ಬಾಗಿದ್ದಾರೆ.
ದೊಡ್ಮನೆಯಲ್ಲಿ ಬಿಗ್ ಬಾಸ್ ಕೊಟ್ಟ ಬಾಲ್ ಆಟದ ಟಾಸ್ಕ್ವೊಂದರಲ್ಲಿ ಫೈನಲಿ ಗೆದ್ದಿದ್ದು ಗುರೂಜಿ ಅಂಡ್ ಸೋಮಣ್ಣ. ನಾನು ಸ್ಟ್ರಾಂಗ್ ಅಂತಿದ್ದೋರೆಲ್ಲಾ ಬಾಲ್ ಬಿಸಾಕಿ ಹೋಗಿಯೇ ಬಿಟ್ಟರು. ಗುರೂಜಿಯಿಂದ ಸಾಧ್ಯವಾ, ಸೋಮಣ್ಣನಿಗೆ ಅಷ್ಟು ಶಕ್ತಿ ಇದೆಯಾ ಅಂದುಕೊಂಡವರಿಗೆ ಇಬ್ಬರು ತಲಾ 12 ಸಾವಿರ ಗೆದ್ದು ಮನೆಗೆ 50 ಸಾವಿರ ತಂದುಕೊಡುವಲ್ಲಿ ಯಶಸ್ವಿಯಾದರು. ಬಾಲ್ ಹಿಡಿಯುವುದು ಅಷ್ಟು ಸುಲಭದ ಕೆಲಸವಲ್ಲ. ಅದೇನು ಸಣ್ಣ ಬಾಲ್ ಅಲ್ಲ. ದೇಹದ ಎರಡರಷ್ಟಿತ್ತು.ಗುರೂಜಿಯದ್ದೋ ಹೊಟ್ಟೆ ಸ್ವಲ್ಪ ಜಾಸ್ತಿಯೇ ಇತ್ತು. ಆದರೂ ಬಾಲನ್ನ ಹಿಡಿದು ಮೂರು ಗಂಟೆಗಳ ಕಾಲ ಬ್ಯಾಲೆನ್ಸ್ ಮಾಡಿದ್ದಾರೆ. ಆ ಬ್ಯಾಲೆನ್ಸ್ ಮಾಡುವ ಮಧ್ಯೆ ನಡೆಯಿತಲ್ಲ ಕಾಮಿಡಿ ಅದನ್ನು ಕೇಳಿ, ಮನೆಮಂದಿ ಮತ್ತು ವೀಕ್ಷಕರು ನಕ್ಕು ನಕ್ಕು ಸಾಕಾಗಿದ್ದಾರೆ. ಇದನ್ನೂ ಓದಿ:ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿ

ಈ ಮಾರ್ಕೇಟ್ ತಗೊಂಡು ನಾನೇನ್ ಮಾಡ್ಲಿ. ಸೂಪರ್ ಸ್ಟಾರ್ ಆಗ್ಲಾ. ದೊಡ್ಡ ಹೀರೋ ಆಗ್ಲಾ ಇರೋದಕ್ಕೆ ಮನೆ ಇಲ್ವಾ. ಎಲ್ಲೋ ಕೊಡೋ ಮನೆಗೆ ನಾನ್ಯಾಕೆ ಹೋಗ್ಲಿ ಎಂದಾಗ ಸೋನು, ಸುಮ್ನೆ ನಿಂತ್ಕೊಳಿ ಹಂಗAದ್ರೆ ಶನಿವಾರ ಕಳಿಸಿಬಿಡ್ತಾರೆ ಎಂದಿದ್ದಾಳೆ. ಅದಕ್ಕೆ ಗುರೂಜಿ, ನನ್ನನ್ನ ಕಳ್ಸಿಬಿಟ್ರೆ ನಿನಗೊಂದು ತೆಂಗಿನಕಾಯಿ ಒಡೆದು ನೆಮ್ಮದಿಯಾಗಿ ಹೋಗಿ ಬಿಡ್ತೀನಿ ಎಂದು ಸೋನುಗೆ (Sonu srinivas gowda) ಗುರೂಜಿ ತಮಾಷೆಯಾಗಿ ವಾರ್ನಿಂಗ್ ಕೊಟ್ಟಿದ್ದಾರೆ.



