ವೇಷಧಾರಿಯಾಗಿ ಆರ್ಯನ್ ಆಗಮನ!

Public TV
1 Min Read
Veshadhari 6 copy

ಕನ್ನಡ ಚಿತ್ರರಂಗದಲ್ಲೀಗ ಹೊಸಾ ಅಲೆಯ ಶಕೆ ಚಾಲ್ತಿಯಲ್ಲಿದೆ. ಸಣ್ಣಗೊಂದು ಅವಲೋಕನ ನಡೆಸಿದರೂ ಈ ವರ್ಷವೇ ಹೊಸ ಬಗೆಯ ಸಿನಿಮಾಗಳು, ಹೊಸ ಪ್ರತಿಭೆಗಳ ಆಗಮನ ನಿರ್ಣಾಯಕವಾಗಿಯೇ ಆಗಿದೆ. ಹಲವು ಹೊಸಬರು ನಾಯಕ ನಾಯಕಿಯರಾಗಿ ಭರವಸೆ ಹುಟ್ಟಿಸಿದ್ದಾರೆ. ಅದೇ ಸಾಲಿನಲ್ಲಿ ಹೊಸ ವರ್ಷದ ಆರಂಭಿಕ ಘಳಿಗೆಯಲ್ಲಿಯೇ ಮತ್ತೊಂದು ನವ ಪ್ರತಿಭೆ ವೇಷಧಾರಿಯಾಗಿ ಆಗಮಿಸಲು ಅಖಾಡ ಸಜ್ಜುಗೊಂಡಿದೆ.ಈ ವಾರ ಬಿಡುಗಡೆಗೊಳ್ಳಲಿರುವ ವೇಷಧಾರಿ ಚಿತ್ರದ ಮೂಲಕ ಆರ್ಯನ್ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಶಿವಾನಂದ ಭೂಶಿ ನಿರ್ದೇಶನದಲ್ಲಿ ಮೂಡಿ ಬಂದಿರೋ ವೇಷಧಾರಿ ತನ್ನ ನಾನಾ ಗೆಟಪ್ಪುಗಳ ಮೂಲಕ ಟ್ರೇಲರ್ ಮತ್ತು ಪೋಸ್ಟರ್‍ಗಳ ಸ್ವರೂಪದಲ್ಲಿ ಎಲ್ಲರನ್ನೂ ಸೆಳೆದುಕೊಂಡಿದ್ದಾನೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರೋ ಆರ್ಯನ್ ಪಾಲಿಗಿದು ಮೊದಲ ಅನುಭವ. ಈ ಮೊದಲ ಹೆಜ್ಜೆಯಲ್ಲಿಯೇ ಅವರಿಗೆ ಸವಾಲಿನ ಪಾತ್ರವೇ ಸಿಕ್ಕಿದೆ. ಯಾಕೆಂದರೆ, ಅವರ ಪಾತ್ರಕ್ಕಿಲ್ಲಿ ಹಲವಾರು ಶೇಡುಗಳಿವೆ. ಪ್ರೇಮಿಯಾಗಿ, ಸರ್ವಸಣಂಗ ಪರಿತ್ಯಾಗದ ಬಯಕೆ ಹೊಂದಿದ ಪಾತ್ರವಾಗಿ ಕಾಣಿಸಿಕೊಂಡಿರೋ ಅವರು ಪಕ್ಕಾ ಆಕ್ಷನ್ ಮೂಡಿನಲ್ಲಿಯೂ ಮಿಂಚಿದ್ದಾರೆ.

VESHADHARI 3

ಈ ಮೂಲಕವೇ ಆರ್ಯನ್ ಆರಂಭಿಕ ಹಂತದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಅವರಿಲ್ಲಿ ಪಳಗಿದ ನಟನಂತೆಯೇ ಕಾಣಿಸಿಕೊಂಡು ಅಚ್ಚರಿ ಹುಟ್ಟಿಸಿದ್ದಾರೆ. ಈ ಸಿನಿಮಾದಲ್ಲಿ ಶ್ರುತಿ, ಸೋನಂ ರೈ, ಅಶ್ವಿತಾ ನಾಯಕಿಯರಾಗಿ ಆರ್ಯಗೆ ಜೊತೆಯಾಗಿದ್ದಾರೆ. ಕುರಿ ರಂಗ, ವೈಜನಾಥ್ ಬಿರಾದಾರ್, ಮೈಕಲ್ ಮಧು, ಮಿಮಿಕ್ರಿ ಗೋಪಿ ಮುಂತಾದ ಕಲಾವಿದರ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ವಿ ಮನೋಹರ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಹಾಡುಗಳಂತೂ ಎಲ್ಲರಿಗೂ ಹಿಡಿಸಿವೆ. ಕನ್ನಡದಲ್ಲಿ ಈವರೆಗೂ ಬಾರದಿರೋ ವಾಸ್ತವಕ್ಕೆ ಹತ್ತಿರಾದ ಕಥೆಯನ್ನೊಳಗೊಂಡಿರುವ ವೇಷಧಾರಿ ಈ ವಾರವೇ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *