ಬಾದ್ ಷಾ ಶಾರುಖ್ ಖಾನ್ (Shah Rukh Khan) ಹಿರಿಯ ಪುತ್ರ ಆರ್ಯನ್ ಖಾನ್ ಈಗಾಗ್ಲೇ ಬಾಲಿವುಡ್‌ಗೆ ಮುಂದಡಿ ಇಟ್ಟಿದ್ದಾರೆ. ಆದ್ರೆ ಅದು ಕ್ಯಾಮೆರಾ ಹಿಂದೆ.
ವೆಬ್ ಸಿರೀಸ್ ನಿರ್ದೇಶಕ ಆಗಿರುವ ಆರ್ಯನ್ ಖಾನ್ (Aryan Khan) ಇತ್ತೀಚೆಗೆ ಬೆಂಗಳೂರಿನ ಕಾರ್ಯಕ್ರಮವೊಂದರ ಅತಿಥಿಯಾಗಿ ಬಂದಿದ್ದರು. ಈ ವೇಳೆ ನಟಿ ಧನ್ಯಾ ರಾಮ್‌ಕುಮಾರ್ (Dhanya Ramkumar) ಆರ್ಯನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕನ್ನಡ ಸಿನಿಮಾ ನಟಿಯಾಗಿರುವ ಡಾ.ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ಇದೀಗ ಆರ್ಯನ್ ಖಾನ್ ಪಕ್ಕದಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನ ಥಟ್ ಅಂತ ನೋಡಿದ್ರೆ ಆರ್ಯನ್ ಖಾನ್ ಜೊತೆ ಧನ್ಯಾ ಸಿನಿಮಾ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಮೂಡುತ್ತೆ. ಆದರೆ ಬೆಂಗಳೂರಿಗೆ ಕಾರ್ಯಕ್ರಮದಲ್ಲಿ ಬಂದಿದ್ದ ವೇಳೆ ಧನ್ಯಾ, ಆರ್ಯನ್ ಖಾನ್‌ರನ್ನ ಭೇಟಿಯಾಗಿದ್ದು ಈ ವೇಳೆ ಫೋಟೋ ತೆಗೆಸಿಕೊಂಡಿದ್ದಾರೆ.
ಆರ್ಯನ್ ಖಾನ್ ಸ್ವಾಗತಕ್ಕೆ ನಟ ಝೈದ್ ಖಾನ್ ಕೂಡ ಇದ್ರು ಎನ್ನಲಾಗುತ್ತಿದೆ. ಅಂದಹಾಗೆ ಆರ್ಯನ್ ಇನ್ನೂ ಒಂದೂ ಸಿನಿಮಾದಲ್ಲೂ ಅಭಿನಯಿಸಿಲ್ಲ. ಆದರೂ ತಂದೆಯ ಕ್ರೇಜ್‌ನೊಂದಿಗೆ ಪುತ್ರನೂ ಫೇಮಸ್ ಅನ್ನೋದು ಬೆಂಗಳೂರು ಬಂದಾಗ ಗೊತ್ತಾಗಿದೆ.



