ಬೆಂಗಳೂರು: ಇಲ್ಲಿನ ಪ್ರತಿಷ್ಠಿತ ಪಬ್‌ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯಾನ್ ಖಾನ್ (Aryan Khan) ಅನುಚಿತ ವರ್ತನೆ ಪ್ರಕರಣ ಸಂಬಂಧ ಸ್ಟಾರ್ ಕಿಡ್‌ಗಳಿಗೆ ಕಾನೂನು ಕಂಟಕ ಎದುರಾಗುವ ಸಾಧ್ಯತೆಯಿದ್ದು, ಗಲಾಟೆ ಸೇರಿದಂತೆ ಅನುಚಿತ ವರ್ತನೆ ಬಗ್ಗೆ ರಿಪೋರ್ಟ್ ನೀಡುವಂತೆ ಗೃಹ ಸಚಿವರು ತಾಕೀತು ಮಾಡಿದ್ದಾರೆ.
ಪ್ರಕರಣ ಸಂಬಂಧ ಜೈದ್ ಖಾನ್ ಹಾಗೂ ನಲಪಾಡ್‌ಗೆ ಕಾನೂನು ಕಂಟಕ ಎದುರಾಗುವ ಸಾಧ್ಯತೆಯಿದೆ. ಶಾಸಕ, ಸಚಿವರ ಹೆಸರು ಕೂಡ ತಳಕು ಹಾಕಿರುವ ಹಿನ್ನೆಲೆ ಪ್ರಕರಣದ ತನಿಖೆ ನಡೆಸಲು ಸ್ವತಃ ಗೃಹ ಸಚಿವರು ಸೂಚನೆ ನೀಡಿದ್ದಾರೆ. ಈಗಾಗಲೇ ಪ್ರಾಥಮಿಕ ಹಂತದ ತನಿಖೆ ನಡೆಸಲಾಗಿದೆ. ಅಲ್ಲದೇ, ತನಿಖೆ ವೇಳೆ ಪಬ್‌ನಲ್ಲಿ ಗಲಾಟೆ ನಡೆದಿತ್ತು ಅನ್ನೋ ಮಾಹಿತಿ ಸಹ ಲಭ್ಯವಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಮುಂದೆ ಮಧ್ಯದ ಬೆರಳು ತೋರಿಸಿ ಆರ್ಯನ್ ಖಾನ್ ಉದ್ಧಟತನ – ಸ್ಪಷ್ಟನೆ ಕೊಟ್ಟ ಜಮೀರ್ ಪುತ್ರ
ಪೊಲೀಸರು ಪಬ್‌ನ ಸಿಸಿಟಿವಿ ಪರಿಶೀಲನೆ ನಡೆಸಿ ಕೆಲವರ ಹೇಳಿಕೆ ಪಡೆದುಕೊಂಡಿದ್ದಾರೆ. ಸರಿಯಾದ ಸಾಕ್ಷ್ಯ ಇಲ್ಲದೆ ಯಾರಿಗೂ ನೋಟಿಸ್ ಕೊಡಲು ಆಗಲ್ಲ. ತಕ್ಕ ಸಾಕ್ಷಿ ಸಿಕ್ಕರೆ ನೇರವಾಗಿ ನೋಟಿಸ್ ನೀಡಲಿದ್ದಾರೆ.
ಸಾರ್ವಜನಿಕ ದೃಷ್ಟಿಯಲ್ಲಿ ಆರ್ಯನ್ ಖಾನ್ ವರ್ತನೆ ತಪ್ಪು. ಆದರೆ, ಯಾವ ಕಾರಣಕ್ಕೆ ಆತ ಆ ರೀತಿ ವರ್ತಿಸಿದ್ದಾನೆ ಎನ್ನುವುದು ಪತ್ತೆಯಾಗಿಲ್ಲ. ಸದ್ಯ ಪಬ್‌ನಲ್ಲಿ ನಡೆದಿರುವ ಎರಡು ಘಟನೆಗಳಿಗೂ ಆರ್ಯನ್ ಖಾನ್ ವರ್ತನೆಗೂ ಲಿಂಕ್ ಇದೆಯಾ ಅಂತಾ ಪಬ್ ಮಾಲೀಕರು ಹಾಗೂ ಸಿಬ್ಬಂದಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಹುದ್ದೆಗೆ 500 ಕೋಟಿ ಕೊಡುವುದಾಗಿದ್ರೆ ಕನಕಪುರ, ಬೆಳಗಾವಿಯ ಸಾಹುಕಾರ ರೇಸ್‌ನಲ್ಲಿ ಇರ್ತಿದ್ರು: ಸಿ.ಟಿ ರವಿ


