ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಕಿಡ್ನಾಪ್ ಮಾಡಿ, ಹಣ ಕೇಳಲಾಗಿತ್ತು ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಡ್ರಗ್ಸ್ ಕೇಸ್ ಪ್ರಕರಣ ಅಂತಿಮವಾಗಿಲ್ಲದೇ, ಈ ನಡುವೆಯೇ ಆರ್ಯನ್ ಖಾನ್ ಜಾಮೀನು ಪಡೆದುಕೊಂಡು ಇತ್ತೀಚೆಗೆ ಹೊರಬಂದಿದ್ದಾರೆ. ಅದು ಅಲ್ಲದೇ ಆರ್ಯನ್ ಕೇಸ್ ನೋಡಿಕೊಳ್ಳುತ್ತಿದ್ದ ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಭ್ರಷ್ಟಚಾರದ ಆರೋಪಗಳು ಸಹ ಕೇಳಿಬರುತ್ತಿದೆ. ಈ ಹಿನ್ನೆಲೆ ಸಮೀರ್ ಆರ್ಯನ್ ಅವರನ್ನು ಅಪಹರಿಸಿಬೇಕೆಂದು ಈ ಆರೋಪ ಅವರ ಮೇಲೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ನವಾಬ್ ಮಾಡಿದ್ದಾರೆ. ಇದನ್ನೂ ಓದಿ: ಸೋನಂ, ರಿಯಾ ಫೋಟೋ ಹಾಕಿ ಮಿಸ್ ಮಾಡ್ಕೊಳ್ತಿದ್ದೀನಿ ಅಂದ್ರು ಅನಿಲ್ ಕಪೂರ್
ಈ ಕುರಿತು ಮಾತನಾಡಿದ ಅವರು, ಎನ್‍ಸಿಬಿ ನಾಯಕರ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿದೆ. ಈ ಹಿಂದೆ ಸಮೀರ್ ನೇತೃತ್ವದಲ್ಲಿ ಹಡಗಿನ ಮೇಲೆ ದಾಳಿ ನಡೆಸಿದ ನಂತರ 23 ವರ್ಷದ ಯುವಕನನ್ನು ಕಳೆದ ತಿಂಗಳು ಬಂಧಿಸಲಾಯಿತು. ಈ ವೇಳೆ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ನಂತರ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಸಹ ನೀಡಿತ್ತು. ಆದರೆ ಬೇಕೆಂದು ಆರ್ಯನ್ ಅವರನ್ನು ಇದರಲ್ಲಿ ಸೇರಿಸಿ ಶಾರೂಖ್ ಅವರಿಗೆ ಸಮೀರ್ ಮತ್ತು ಬಿಜೆಪಿ ಮುಖಂಡ ಮೋಹಿತ್ ಅವರು ಹಣಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದರು ಎಂದು ಆರೋಪ ಮಾಡಿದ್ದಾರೆ.
ಅದು ಅಲ್ಲದೇ ಡ್ರಗ್ಸ್ ಪಾರ್ಟಿ ನಡೆದಿತ್ತು ಎನ್ನಲಾದ ಐಷಾರಾಮಿ ಹಡಗಿನಲ್ಲಿ ಆರ್ಯನ್ ಟಿಕೆಟ್ ಅನ್ನು ಪಡೆದಿರಲಿಲ್ಲ. ಅವರನ್ನು ಪ್ರತೀಕ್ ಗಾಬಾ ಮತ್ತು ಆಮಿರ್ ಫರ್ನೀಚರ್‍ವಾಲ್ ಅವರು ಕರೆದುಕೊಂಡು ಹೋಗಿದ್ದರು. ಇದು ಕಿಡ್ನಾಪ್ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣವಾಗಿದೆ. ಇದರ ಹಿಂದೆ ಮೋಹಿತ್ ಅವರ ಮಾಸ್ಟರ್ ಮೈಂಡ್ ಇದೆ ಎಂದಿದ್ದಾರೆ.
ಸಮೀರ್ ಅವರು ಆರ್ಯನ್ ಅರೆಸ್ಟ್ ಆದ ಬಳಿಕ ಭಯಗೊಂಡಿದ್ದರು. ಅದಕ್ಕೆ ಅ.7ರಂದು ಓಶಿವಾರಾ ಸ್ಮಶಾನದ ಬಳಿ ಮೋಹಿತ್ ಮತ್ತು ಸಮೀರ್ ಭೇಟಿ ಆಗಿದ್ದರು. ಅವರ ಅದೃಷ್ಟಕ್ಕೆ ಅಲ್ಲಿಂದ ಸಿಸಿಟಿವಿ ಹಾಳಾಗಿತ್ತು. ಆದ್ದರಿಂದ ನಮಗೆ ಸರಿಯಾಗಿ ಈ ಕುರಿತು ಮಾಹಿತಿ ಮತ್ತು ಸಾಕ್ಷಿಗಳು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಜಾಗೃತಿ ಅಭಿಯಾನಕ್ಕೆ ಕೇಳಿದ ತಕ್ಷಣ ಹಿಂದೆ ಮುಂದೆ ನೋಡದೆ ಬಂದಿದ್ದ ಅಪ್ಪು
ನವಾಬ್ ಅವರು ಅನೇಕ ಆರೋಪಗಳನ್ನು ಹೊರಿಸುತ್ತಿದ್ದು, ಇವರ ವಿರುದ್ಧ ಸಮೀರ್ ಅವರ ತಂದೆ ಧ್ಯಾನದೇವ್ ಕಚ್ರುಜಿ ವಾಂಖೆಡೆ 1.25 ಕೊಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅದು ಅಲ್ಲದೇ ನವಾಬ್ ಅವರು ಸಮೀರ್ ಅವರ ಕುಟುಂಬವನ್ನು ವಂಚಕ ಕುಟುಂಬ ಎಂದು ಕರೆದಿದ್ದು, ಅವರ ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸಿದ್ದಾರೆ. ಅವರನ್ನು ಹಿಂದೂಗಳ ಕುಟುಂಬವಲ್ಲ ಎಂದು ಟೀಕಿಸಿದ್ದರು. ಅದು ಅಲ್ಲದೇ ಅವರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು.