NCB ವಿಚಾರಣೆಯಿಂದ ಆರ್ಯನ್ ಖಾನ್ ಎಸ್ಕೇಪ್- ಶಾರೂಖ್ ಮಗ ಕೊಟ್ಟ ಕಾರಣ ಏನು?

Public TV
2 Min Read
ARYAN KHAN 1

ಮುಂಬೈ: ಡ್ರಗ್ ಕೇಸ್‍ನಲ್ಲಿ ಸಿಕ್ಕಿ ಬಿದ್ದಿದ್ದ ಬಾಲಿವುಡ್ ನಟ ಆರ್ಯನ್‍ ಖಾನ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ ಇಂದು ನಡೆಯ ಬೇಕಿದ್ದ ಎನ್‍ಸಿಬಿ ವಿಚಾರಣೆಯಿಂದ ಆರ್ಯನ್‍ಖಾನ್ ತಪ್ಪಿಸಿಕೊಂಡಿದ್ದಾರೆ.

ARYAN

ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತ್ತು. ಆದರೆ ಈಗ ಆರ್ಯನ್‍ ಖಾನ್ ಇಂದು (ನವೆಂಬರ್ 7) ವಿಚಾರಣೆಗೆ ಹಾಜರಾಗಿಲ್ಲ. ತಾವು ವಿಚಾರಣೆಗೆ ಏಕೆ ಹಾಜರಾಗುತ್ತಿಲ್ಲ ಎಂಬುದಕ್ಕೆ ಆರ್ಯನ್‍ ಖಾನ್ ಎನ್‍ಸಿಬಿ ಅಧಿಕಾರಿಗಳಿಗೆ ಕಾರಣವನ್ನೂ ನೀಡಿದ್ದಾರೆ.

shah rukha khan aryan 3

ಡಿಡಿಜಿ ಎನ್‍ಸಿಬಿ ಸಂಜಯ್ ಸಿಂಗ್ ಅವರು ಆರ್ಯನ್‍ ಖಾನ್‍ಗೆ ಬುಲಾವ್ ನೀಡಿದ್ದರು. ಆದರೆ ಆರ್ಯನ್‍ಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಈ ಕಾರಣಕ್ಕೆ ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದರಿಂದ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ ವಿಚಾರಣೆಗೆ ಬೇರೊಂದು ದಿನಾಂಕ ನೀಡುವಂತೆ ಅವರು ಕೋರಿದ್ದಾರೆ. ಇದಕ್ಕೆ ಎನ್‍ಸಿಬಿ ಅಧಿಕಾರಿಗಳು ಸಮ್ಮತಿ ನೀಡಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಮೈಸೂರಲ್ಲಿ ಶಿಕ್ಷಕರಿಗೆ ಜೀನ್ಸ್ ಪ್ಯಾಂಟ್ ಬ್ಯಾನ್

ARYAN

ಆರ್ಯನ್‍ ಖಾನ್ ಭಾಗಿಯಾಗಿದ್ದರು ಎನ್ನಲಾದ ರೇವ್ ಪಾರ್ಟಿ ಮೇಲೆ ದಾಳಿ ನಡೆದ ದಿನ ಎನ್‍ಸಿಬಿ ಅಧಿಕಾರಿಗಳ ಜೊತೆ ಖಾಸಗಿ ಡಿಟೆಕ್ಟೀವ್ ಕಿರಣ್ ಗೋಸಾವಿ ಮತ್ತು ಅವರ ಬಾಡಿಗಾರ್ಡ್ ಪ್ರಭಾಕರ್ ಸೈಲ್ ಕೂಡ ಹಾಜರಿದ್ದರು. ಇವರಿಬ್ಬರು ಪ್ರಮುಖ ಸಾಕ್ಷಿಗಳಾಗಿದ್ದಾರೆ. ಇದನ್ನೂ ಓದಿ:  ಕೇರಳದಲ್ಲಿ120 ವರ್ಷಗಳಲ್ಲಿಯೇ ಅತ್ಯಧಿಕ ಮಳೆ

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖಂಡ ನವಾಬ್ ಮಲಿ ಕೂಡ ಸಮೀರ್ ವಾಂಖೆಡೆ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ಇವುಗಳ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರವು ತನಿಖೆ ನಡೆಸಲು ವಿಶೇಷ ತಂಡ ರಚಿಸಿದೆ. ಇತ್ತೀಚೆಗೆ ತನಿಖಾ ನೇತೃತ್ವವೂ ಸಮೀರ್ ಅವರ ಕೈತಪ್ಪಿತ್ತು. ಶಾರುಖ್‍ಖಾನ್ ಪುತ್ರ ಆರ್ಯನ್‍ಖಾನ್ ಅವರನ್ನು ಬಂಧಿಸಿದ ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಅನೇಕ ಆರೋಪಗಳು ಕೇಳಿಬಂದಿವೆ. ಈ ಬೆನ್ನಲ್ಲೇ, ಪ್ರಕರಣದ ತನಿಖೆಯಿಂದ ಸಮೀರ್ ವಾಂಖೆಡೆಯನ್ನು ಹೊರಗಿಡಲಾಗಿದೆ. ಈ ಪ್ರಕರಣದ ಬಗ್ಗೆ ಕೇಂದ್ರದ ಉನ್ನತ ತಂಡ ತನಿಖೆ ನಡೆಸಲು ಆರಂಭಿಸಿದೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

Share This Article
Leave a Comment

Leave a Reply

Your email address will not be published. Required fields are marked *