ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಛೇರಿಯಲ್ಲಿ ಮೂರು ವರ್ಷದಲ್ಲಿ ಚಹಾ ಮತ್ತು ತಿಂಡಿಗಾಗಿ 1.03 ಕೋಟಿ ರೂ ಗಳನ್ನು ಖರ್ಚು ಮಾಡಲಾಗಿರುವ ವಿಚಾರ ಮಾಹಿತಿ ಹಕ್ಕು ಕಾಯ್ದೆಯ ಅಡಿ ಬಯಲಾಗಿದೆ.
2015-16 ರಲ್ಲಿ 23.12 ಲಕ್ಷ ರೂ., 2016-17 ರಲ್ಲಿ 46.54 ಲಕ್ಷ ರೂ., 2017-18 ಆರ್ಥಿಕ ವರ್ಷದಲ್ಲಿ 33.36 ಲಕ್ಷ ರೂ. ಗಳನ್ನು ಚಹಾ ಮತ್ತು ತಿಂಡಿಗಾಗಿ ಖರ್ಚು ಮಾಡಲಾಗಿದೆ ಎಂದು ಆರ್ ಟಿ ಐ ಕಾರ್ಯಕರ್ತ ಹೇಮಂತ್ ಸಿಂಗ್ ಗೌನ್ಯ ತಿಳಿಸಿದ್ದಾರೆ.
Advertisement
ಇದು ದುಂದು ವೆಚ್ಚವಾಗಿದ್ದು ಇದೇ ಹಣವನ್ನು ಒಪ್ಪತ್ತು ಊಟಕ್ಕೂ ಇಲ್ಲದವರಿಗೆ ವಿನಿಯೋಗಿಸಬಹುದು. ಈ ವೆಚ್ಚವನ್ನು ತಗ್ಗಿಸಿ ಒಳ್ಳೆಯ ಕೆಲಸಗಳಿಗೆ ಸರ್ಕಾರ ಬಳಸುತ್ತದೆ ಅಂತಾ ಅಂದು ಕೊಂಡಿದ್ದೇನೆ ಎಂದು ಹೇಮಂತ್ ಅಭಿಪ್ರಾಯಪಟ್ಟಿದ್ದಾರೆ.