ನವದೆಹಲಿ: ಗುರುವಾರದಂದು ದೆಹಲಿ ಸಚಿವಾಲಯದ ಆವರಣದಿಂದ ಕಳ್ಳತನವಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೀಲಿ ಬಣ್ಣದ ವ್ಯಾಗನ್ ಆರ್ ಕಾರು ಪತ್ತೆಯಾಗಿದೆ.
ಕಾರು ಗಜಿಯಾಬಾದ್ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರಪ್ರದೇಶ ಪೊಲೀಸರು ಕಾರನ್ನು ಪತ್ತೆ ಮಾಡಿ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ರೆ ಕಳ್ಳತನಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನವಾಗಿಲ್ಲ. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಕಳ್ಳನನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳನ ಮುಖ ಚಹರೆ ಕಾಣಿಸಿದ್ದು, ಆತನ ಫೋಟೋವನ್ನ ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ಹಂಚಿದ್ದಾರೆ.
Advertisement
Advertisement
ಕಾರ್ ಕಳ್ಳತನವಾಗಿದ್ದಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಶುಕ್ರವಾರದಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರಿಗೆ ಪತ್ರ ಬರೆದಿದ್ದರು. ದೆಹಲಿ ಸಚಿವಾಲಯದ ಹೊರಗಡೆ ನನ್ನ ಕಾರು ಕಳ್ಳತನವಾಗಿದೆ. ನನ್ನ ಕಾರ್ ಕಳ್ಳತನವಾಗಿದೆ ಅನ್ನೋದು ಚಿಕ್ಕ ವಿಚಾರವೇ. ಆದ್ರೆ ದೆಹಲಿ ಸಚಿವಾಲಯದ ಹೊರಗಡೆ ಕಳ್ಳತನವಾಗಿದೆ ಅನ್ನೋದು ಕಾನೂನು ಸುವ್ಯವಸ್ಥೆ ತ್ವರಿತವಾಗಿ ಕ್ಷೀಣಿಸುತ್ತಿದೆ ಎಂಬುದನ್ನ ಸೂಚಿಸುತ್ತಿದೆ ಎಂದು ಕೇಜ್ರೀವಾಲ್ ಪತ್ರದಲ್ಲಿ ಹೇಳಿದ್ದರು.
Advertisement
Advertisement
ಅಲ್ಲದೆ ದೆಹಲಿ ಪೊಲೀಸರನ್ನ ಕುರಿತು “ನಿಮ್ಮ ಗಮನ ಎಲ್ಲಿದೆ” ಎಂದು ಟ್ವೀಟ್ ಮಾಡಿದ್ದರು.
ವಿದೇಶಿ ಸ್ನೇಹಿತರೊಬ್ಬರು ಕೇಜ್ರಿವಾಲ್ ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2014ರಲ್ಲಿ ಪೊಲೀಸರ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಈ ಕಾರಿನಲ್ಲೇ ಕೇಜ್ರಿವಾಲ್ ರಾತ್ರಿ ನಿದ್ದೆ ಮಾಡಿದ್ದರು. ಆರಂಭದಲ್ಲಿ ಆಪ್ ಪ್ರಚಾರ ಕಾರ್ಯದ ವೇಳೆ ಈ ಕಾರು ಮೂಲಕವೇ ಕೇಜ್ರಿವಾಲ್ ಪ್ರಚಾರಕ್ಕೆ ತೆರಳುತ್ತಿದ್ದರು.
Blue Wagon R car which was earlier used by Arvind Kejriwal and had been stolen on Oct 12 has been recovered from Ghaziabad pic.twitter.com/MFgvvrUdWe
— ANI (@ANI) October 14, 2017