ನವದೆಹಲಿ: 2,700 ಕೋಟಿ ರೂಪಾಯಿ ಮೌಲ್ಯದ ಮನೆ ನಿರ್ಮಿಸಿ, 8,400 ಕೋಟಿ ರೂಪಾಯಿ ಮೌಲ್ಯದ ವಿಮಾನದಲ್ಲಿ ಹಾರಾಟ ನಡೆಸಿ, 10 ಲಕ್ಷ ರೂ. ಸೂಟ್ ಧರಿಸುವವರಿಂದ `ಶೀಷ ಮಹಲ್’ (sheeshmahal) ಪ್ರಸ್ತಾಪ ಸೂಕ್ತವಲ್ಲ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಕುಟುಕಿದರು.
ಆಪ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಪ್ರಧಾನಿ ಮೋದಿ (Narendra Modi) ಅವರಿಗೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದರು. ಇದನ್ನೂ ಓದಿ: ಆಪ್ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ – ಎಎಪಿ ದೆಹಲಿ ನಗರಕ್ಕೆ ಆಪತ್ತು ಎಂದ ಪ್ರಧಾನಿ
ನಿಜವಾದ ಅನಾಹುತ, ವಿಪತ್ತುಗಳು ದೆಹಲಿಯಲ್ಲಿಲ್ಲ, ಅದು ಬಿಜೆಪಿಯಲ್ಲಿದೆ. ಮೊದಲ ಅನಾಹುತವೆಂದರೆ ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಇಲ್ಲದೇ ಇರೋದು, ದೆಹಲಿ ಚುನಾವಣೆಗೆ ಯಾವುದೇ ಅಜೆಂಡಾ ಇಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ – ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಪತ್ರ ಬರೆದ ಸಂಸದ ಸುಧಾಕರ್
ಇದೇ ವೇಳೆ ನಾನು ಜನರಿಗಾಗಿ ಮನೆ ಕಟ್ಟಿದ್ದೇನೆ, ನನಗಾಗಿ `ಶೀಷ ಮಹಲ್’ ಕಟ್ಟಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ, 2,700 ಕೋಟಿ ರೂಪಾಯಿ ಮೌಲ್ಯದ ಮನೆ ನಿರ್ಮಿಸಿ, 8,400 ಕೋಟಿ ರೂಪಾಯಿ ಮೌಲ್ಯದ ವಿಮಾನದಲ್ಲಿ ಹಾರಾಟ ನಡೆಸಿ, 10 ಲಕ್ಷ ರೂಪಾಯಿ ಸೂಟ್ ಧರಿಸುವವರಿಂದ ಶೀಷ ಮಹಲ್ ಪ್ರಸ್ತಾಪ ಸೂಕ್ತವಲ್ಲ ಎಂದರು.
ದೆಹಲಿಯಲ್ಲಿ 4 ಲಕ್ಷ ಕೊಳಗೇರಿಗಳಿವೆ, 15 ಲಕ್ಷ ಜನರಿಗೆ ಮನೆಗಳ ಅಗತ್ಯವಿದೆ. ಬಿಜೆಪಿ ತನ್ನ 2020ರ ಪ್ರಣಾಳಿಕೆಯಲ್ಲಿ, 2022ರ ವೇಳೆಗೆ ದೆಹಲಿಯ ಪ್ರತಿಯೊಬ್ಬರಿಗೂ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದ್ರೆ ಕಳೆದ 5 ವರ್ಷಗಳಲ್ಲಿ ವಿತರಣೆ ಮಾಡಿರುವುದು ಕೇವಲ 4,700 ಮನೆಗಳು ಮಾತ್ರ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಂಗ್ ಅವಧಿಯಲ್ಲಿ 2.9 ಕೋಟಿ, ಮೋದಿ ಕಾಲದಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ: ಕೇಂದ್ರ
ದೆಹಲಿಯಲ್ಲಿ ಪ್ರಧಾನಿ ಮೋದಿ ಮಾಡಿದ 43 ನಿಮಿಷಗಳ ಭಾಷಣದಲ್ಲಿ 39 ನಿಮಿಷಗಳ ಕಾಲ ದೆಹಲಿ ಸರ್ಕಾರವನ್ನ ನಿಂದಿಸಿದ್ದಾರೆ. ವಾಸ್ತವ ಬೇರೆಯೇ ಇದೆ. ಕಳೆದ 10 ವರ್ಷಗಳ ಅವಧಿಯಲ್ಲಿ ನಮ್ಮ ಪಕ್ಷವು ದೆಹಲಿಯಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಲು ಪ್ರಾರಂಭಿಸಿದ್ರೆ ಮೂರು ಗಂಟೆಯೂ ಸಾಕಾಗಕಲ್ಲ ಎಂದು ಕುಟುಕಿದರು.