OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ

Public TV
1 Min Read
ARAVIND KEJRIWAL

ನವದೆಹಲಿ: ಕೊರೊನಾ ವೈರಸ್‍ನ ರೂಪಾಂತರ ತಳಿ ಓಮಿಕ್ರಾನ್ ತಳಿ ಹರಡುವ ಭೀತಿಯಿದ್ದು, ಅದನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

CORONA 3 1

ಕೇಜ್ರಿವಾಲ್ ಅವರು ಸರ್ಕಾರದ ವಿವಿಧ ಇಲಾಖೆಗಳ ಜೊತೆ ಸಿದ್ಧತೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಆಮ್ಲಜನಕ ಸೌಲಭ್ಯವಿರುವ 30,000 ಬೆಡ್‌ಗಳು ಹಾಗೂ ಆಮ್ಲಜನಕ ಪೂರೈಕೆ ಹಾಗೂ ಸಂಗ್ರಹ ವ್ಯವಸ್ಥೆಯನ್ನು ಒಂದೆರಡು ವಾರಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗುವುದು. ಕೊರೊನಾ ರೂಪಾಂತರಿ ವೈರಸ್ ಆಗಿರುವ ಓಮಿಕ್ರಾನ್ ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎವರ್ ಗ್ರೀನ್ ಹೀರೋಯಿನ್ ಸುಧಾರಾಣಿ ಇನ್ಮುಂದೆ ಡಾ.ಸುಧಾರಾಣಿ

OMICRON

30 ಸಾವಿರ ಹಾಸಿಗೆಗಳಲ್ಲಿ 10,000 ಐಸಿಯು ಹಾಸಿಗೆಗಳು ಸೇರಿವೆ. ಇನ್ನೂ 6,800 ಹಾಸಿಗೆಗಳು ಫೆಬ್ರುವರಿ ಹೊತ್ತಿಗೆ ಸಿದ್ಧವಾಗಲಿವೆ. ಪ್ರತೀ ವಾರ್ಡ್‍ನಲ್ಲಿ 100 ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳನ್ನು ಎರಡು ವಾರದಲ್ಲಿ ಸಿದ್ಧಪಡಿಸಲು ಸಾಧ್ಯವಿದೆ. ಒಟ್ಟು 270 ವಾರ್ಡ್‍ಗಳಿಂದ 27,000 ಹಾಸಿಗೆಗಳು ಸಿದ್ಧವಾಗಲಿವೆ. ಸಿಬ್ಬಂದಿಯನ್ನು ಈ ಕುರಿತಾಗಿ ತರಬೇತುಗೊಳಿಸುತ್ತಿದ್ದು, 32 ರೀತಿಯ ಔಷಧಗಳ ಖರೀದಿ ಮಾಡಲಾಗುತ್ತಿದೆ. ಹೋಮ್ ಐಸೊಲೇಷನ್‍ಗೆ ಸಿದ್ಧತೆ ನಡೆಯುತ್ತಿದ್ದು, 121 ಟನ್ ಆಮ್ಲಜನಕ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:   ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

Share This Article
Leave a Comment

Leave a Reply

Your email address will not be published. Required fields are marked *