ನವದೆಹಲಿ: ಕಾಂಗ್ರೆಸ್‍ನ 25 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ, ಆದರೆ ಕಸಗಳನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ
ಪಂಜಾಬ್ ವಿಧಾನಸಭೆಗೆ 2022ರಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಹಲವು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಆ ಪಕ್ಷಕ್ಕೆ ಬೇಡವಾದವರನ್ನು ನಾವೂ ಬಯಸುವುದಿಲ್ಲ. ಜೊಳ್ಳನ್ನೆಲ್ಲ ಸೇರಿಸಿಕೊಳ್ಳುವುದಾದರೆ, ಇಂದು ಸಂಜೆಯೊಳಗೆ ಕಾಂಗ್ರೆಸ್‍ನ 25 ಶಾಸಕರು ಮತ್ತು ಇಬ್ಬರು ಅಥವಾ ಮೂವರು ಸಂಸದರು ನಮ್ಮ ಪಕ್ಷ ಸೇರುತ್ತಾರೆ ಎಂದು ಭರವಸೆ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಗಾಳ ಹಾಕಿದ್ದ ಬಿಜೆಪಿ – ಮೋದಿ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದ ಪುನೀತ್
Advertisement
Advertisement
ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಅರವಿಂದ್ ಕೇಜ್ರಿವಾಲ್, ಈಗ ರಾಜ್ಯದ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಇಲ್ಲಿನ ಸರ್ಕಾರ ಕಣ್ಣಲ್ಲಿ ನೀರಿಡುತ್ತಿದೆ. 15 ವರ್ಷಗಳಿಂದ ಇಲ್ಲಿ ನೀವೇ ಅಧಿಕಾರದಲ್ಲಿ ಇರುವಾಗ ಅದನ್ನು ಖಾಲಿ ಮಾಡಿದ್ದು ಯಾರು? ಆದರೆ ನನಗೆ ಗೊತ್ತಿದೆ ಪಂಜಾಬ್ ಖಜಾನೆ ಹೇಗೆ ತುಂಬಿಸಬೇಕು ಎಂಬುದು ಎಂದು ದೆಹಲಿ ಸಿಎಂ ಹೇಳಿದ್ದಾರೆ. ಪಂಜಾಬ್‍ನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ದೆಹಲಿಯನ್ನು ನಾವು ಹೇಗೆ ಬದಲಾಯಿಸಿದ್ದೇವೋ ಹಾಗೇ ಇದನ್ನೂ ಬದಲಿಸುತ್ತೇವೆ ಎಂಬ ಭರವಸೆಯನ್ನೂ ನೀಡಿದ್ದಾರೆ.
Advertisement
Advertisement
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಪ್ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಬಲವಾದ ಆಶಯ. ಹಾಗೊಮ್ಮೆ ನಮ್ಮ ಪಕ್ಷ ಗೆದ್ದರೆ ನಾನಂತೂ ಖಂಡಿತವಾಗಿಯೂ ಇಲ್ಲಿನ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ.